March 7, 2026
Saturday, March 7, 2026
spot_img

ಚಿತ್ತಾಪುರದಲ್ಲಿ ವಿಕಾಸದ ಹಬ್ಬ, ದೆಹಲಿಯಲ್ಲಿ ರಾಜಕೀಯ ಗಮ್ಮತ್ತು: ಡಿಕೆಶಿ ಮುಂದಿನ ನಡೆ ಎತ್ತ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಜೆಟ್ ಮಂಡನೆಯ ಮರುದಿನವೇ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಕಲಬುರಗಿಯ ಚಿತ್ತಾಪುರಕ್ಕೆ ಭೇಟಿ ನೀಡಲಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದ ಮುಕ್ತಾಯದ ನಂತರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಲಬುರಗಿಯಿಂದಲೇ ನೇರವಾಗಿ ದೆಹಲಿಗೆ ಪ್ರಯಾಣಿಸಲಿದ್ದಾರೆ.

ಅಧಿಕೃತವಾಗಿ ‘ನೀರಾವರಿ ಇಲಾಖೆಯ ಕೆಲಸಗಳಿಗಾಗಿ’ ಈ ಭೇಟಿ ಎಂದು ಹೇಳಲಾಗುತ್ತಿದ್ದರೂ, ಬಜೆಟ್ ನಂತರದ ಈ ಹೈಕಮಾಂಡ್ ಭೇಟಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !