May 2, 2026
Saturday, May 2, 2026
spot_img

ಪಾಕಿಸ್ತಾನದಲ್ಲಿ ನಡೆದ ‘ಮಹಾ ಸಂಧಾನ’ ವಿಫಲ: ಜಗ್ಗದ ಇರಾನ್, ಬಗ್ಗದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಮಾರು 21 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯ ನಂತರವೂ ಉಭಯ ದೇಶಗಳ ನಡುವೆ ಯಾವುದೇ ಒಮ್ಮತ ಮೂಡಿಬಂದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾನುವಾರ ಪ್ರಕಟಿಸಿದ್ದಾರೆ.

ಮುಂಜಾನೆ ಮುಕ್ತಾಯಗೊಂಡ ಮೂರು ಹಂತದ ಮಾತುಕತೆಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇರಾನ್ ನಮ್ಮ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ನಾವು ಸೌಹಾರ್ದಯುತವಾಗಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದೆವು, ಆದರೆ ದುರದೃಷ್ಟವಶಾತ್ ಪ್ರಗತಿ ಶೂನ್ಯವಾಗಿದೆ,” ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಇರಾನ್ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ದೃಢವಾದ ಭರವಸೆಯನ್ನು ಅಮೆರಿಕ ನಿರೀಕ್ಷಿಸಿತ್ತು. ಇರಾನ್‌ನ ಈ ಹಿಂದಿನ ಪರಮಾಣು ಸೌಲಭ್ಯಗಳು ನಾಶವಾಗಿದ್ದರೂ, ಹೊಸದಾಗಿ ಶಸ್ತ್ರಾಸ್ತ್ರ ತಯಾರಿಸುವುದಿಲ್ಲ ಎಂಬ ಬದ್ಧತೆಯನ್ನು ಪ್ರದರ್ಶಿಸಲು ಅವರು ನಿರಾಕರಿಸಿದ್ದಾರೆ ಎಂದು ವ್ಯಾನ್ಸ್ ಆರೋಪಿಸಿದ್ದಾರೆ.

ಮಾತುಕತೆ ವಿಫಲವಾದರೂ ಅಮೆರಿಕದ ಮೇಲುಗೈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ಈ ಮಾತುಕತೆಯ ಫಲಿತಾಂಶ ಏನೇ ಇರಲಿ, ಮಿಲಿಟರಿ ಶಕ್ತಿಯ ದೃಷ್ಟಿಯಿಂದ ಅಮೆರಿಕ ಈಗಾಗಲೇ ಇರಾನ್ ಅನ್ನು ಸೋಲಿಸಿದೆ. ಅವರು ಒಪ್ಪಂದಕ್ಕೆ ಬರುತ್ತಾರೋ ಇಲ್ಲವೋ ಎಂಬುದು ನಮಗೆ ಮುಖ್ಯವಲ್ಲ,” ಎಂದು ಸಮರ್ಥಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !