Friday, December 19, 2025

ಎರಡು ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯ: ವ್ಯಕ್ತಿಯ ದೇಹದೊಳಗೆ 69 ಬುಲೆಟ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಕಲಹದ ನಂತರ ವ್ಯಕ್ತಿಯೊಬ್ಬರ ವ್ಯಕ್ತಿಯೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ.

ನವೆಂಬರ್ 30 ರಂದು ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಈ ಘಟನೆ ನಡೆದಿದೆ. ರಟ್ಟನ್ ಲೋಹಿಯಾ ಎಂಬುವವರು ಮೃತ ದುರ್ದೈವಿ. ಮೃತರ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಹೊರಗಿನ ದರೋಡೆಕೋರರಿಗೆ ರಟ್ಟನ್ ಲೋಹಿಯಾ ಅವರನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

ದೆಹಲಿ ಪೊಲೀಸರ ಪ್ರಕಾರ, ನವೆಂಬರ್ 30ರ ಮುಂಜಾನೆ ರಟ್ಟನ್ ಲೋಹಿಯಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದರು. ಈ ವೇಳೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿತು. ಹಲವಾರು ಸುತ್ತು ಗುಂಡು ಹಾರಿಸಿದ್ದರಿಂದ ರಟ್ಟನ್ ಸ್ಥಳದಲ್ಲೇ ಮೃತಪಟ್ಟರು.

ವಿಷಯ ತಿಳಿದ ಕೂಜಲೇ ಸ್ಥಳಕ್ಕೆ ಧಾವಿಸಿ ಪರಿಸೀಲಿಸಿದ ಪೊಲೀಸರು, ಖಾಲಿ ಶೆಲ್‌ಗಳು ಮತ್ತು ಮೂರು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡರು. ನವೆಂಬರ್ 30 ರಂದು ಭಾನುವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಆಯಾ ನಗರದ ಮಾರುಕಟ್ಟೆಯ ಬಳಿ ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮೂವರು ದಾಳಿಕೋರರು ರಟ್ಟನ್‌ಗಾಗಿ ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ದೃಶ್ಯಗಳನ್ನು ವಿಶ್ಲೇಷಿಸಿದಾಗ, ಕಾರಿನ ನಂಬರ್ ಪ್ಲೇಟ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಹತ್ಯೆಯನ್ನು ರಂಬೀರ್ ಲೋಹಿಯಾ ಮತ್ತು ಅವರ ಸಂಬಂಧಿಕರು ತಮ್ಮ ಪುತ್ರ ಅರುಣ್ ಅವರ ಸಾವಿಗೆ ಪ್ರತೀಕಾರವಾಗಿ ನಡೆಸಿದ್ದಾರೆ ಎಂದು ರಟ್ಟನ್ ಕುಟುಂಬ ಆರೋಪಿಸಿದೆ.

ಅರುಣ್ ಸಾವಿನ ಪ್ರಕರಣದಲ್ಲಿ ರಟ್ಟನ್ ಅವರ ಹಿರಿಯ ಮಗ ದೀಪಕ್ ಅವರನ್ನು ಬಂಧಿಸಲಾಯಿತು. ರಟ್ಟನ್ ಅವರ ಪುತ್ರಿ ನೀಡಿದ ಸಂದರ್ಶನದಲ್ಲಿ, ರಂಬೀರ್ ಮತ್ತು ಅವರ ಸಂಬಂಧಿಕರು ತಮ್ಮ ತಂದೆಗೆ ಬಹಳ ಸಮಯದಿಂದ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದರು. ತಮ್ಮ ತಂದೆಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ ಎಂದು ಅವರು ಹೇಳಿದ್ದರು.

error: Content is protected !!