October 11, 2026
Sunday, October 11, 2026
spot_img

ಕೊಡಗಿನಲ್ಲಿ ಶಾಕಿಂಗ್ ಘಟನೆ: ನಡುರಸ್ತೆಯಲ್ಲೇ ಗುಂಡು ಹೊಡೆದು ಗುತ್ತಿಗೆದಾರ ಆತ್ಮಹತ್ಯೆ

ಹೊಸದಿಗಂತ ವರದಿ , ಮಡಿಕೇರಿ:

ರಸ್ತೆಯಲ್ಲಿ ಗುಂಡು ಹೊಡೆದುಕೊಂಡು ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗುತ್ತಿಗೆದಾರ ಆಮೆಮನೆ ದೇವಿಪ್ರಸಾದ್ (43) ಎಂದು ಗುರುತಿಸಲಾಗಿದೆ.

ಒಂಟಿ ನಳಿಕೆ ಕೋವಿಯೊಂದಿಗೆ ಮನೆಯಿಂದ ಹೊರ ಬಂದ ದೇವಿಪ್ರಸಾದ್ ಎದೆಗೆ ಗುಂಡು ಹೊಡೆದುಕೊಂಡು‌ ಆತ್ಮಹತ್ಯೆಗೆ ಶರಣಾಗಿರುವುದಾಗಿ‌ ಹೇಳಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರ‌ ಪತ್ನಿ, ಉಪನ್ಯಾಸಕಿ ಕವಿತಾ, ನಗರ ಠಾಣೆ ಅಧಿಕಾರಿ ಅನ್ನಪೂರ್ಣ, ಡಿವೈಎಸ್‌ ಪಿ ಸೂರಜ್‌, ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.

Must Read