ಹೊಸದಿಗಂತ ವರದಿ ಮುಂಡಗೋಡ:
ಟಿಬೆಟಿಯನ್ ಕ್ಯಾಂಪ್ ನಂಬರ 4 ರಲ್ಲಿ ಯಾವುದೊ ದ್ವೇಶದಿಂದ ಟಿಬೆಟಿಯನ್ ವ್ಯಕ್ತಿಗಳಿಬ್ಬರ ನಡುವೆ ಜಗಳ ನಡೆದು ಒಬ್ಬರಿಗೊಬ್ಬರು ಚುರಿ ಇರಿದುಕೊಂಡು ಒಬ್ಬ ಸ್ಥಳದಲ್ಲೆ ಮೃತಪಟ್ಟರೆ ಮತ್ತೊಬ್ಬ ಟಿಬೇಟಿಯನ್ ವ್ಯಕ್ತಿಯು ಗಂಭೀರ ಗಾಯಗೊಂಡು ತಾಲೂಕಾಸ್ಪತ್ರೆಯಲ್ಲಿ ದಾಖಲಾದ ಘಟನೆ ಬುಧವಾರ ಬೆಳಗಿನ ಜಾವ ಜರುಗಿದೆ.
ಮೃತನನ್ನು ಜಮ್ಯಾಂಗ್ ಲಾಕ್ಪಾ (43) ಕ್ಯಾಂಪ್ ನಂಬರ್ 4 ಮನೆ ನಂಬರ್ 43 ರ ಟಿಬೇಟಿಯನ್ ಯುವಕ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಗೊಂಪಾ ಚೋಡೇಕ್ ಗಂಭೀರ ಗಾಯಗೊಂಡ ಮಾಜಿ ಸೈನಿಕನಾಗಿದ್ದು ಈತನು 4 ನಂಬರ್ ಕ್ಯಾಂಪನ 45 ಮನೆ ನಂಬರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಬುಧವಾರ ಬೆಳಗಿನ ಜಾವದಲ್ಲಿ ಮೃತನು ಗಂಬಿರ ಗಾಯಗೊಂಡ ಟಿಬೆಟಿಯನ್ ವ್ಯಕ್ತಿಯ ಮನೆಗೆ ಬಂದು ಬಾಗಿಲು ಬಡೆದಾಗ ಯಾರೋ ಕಳ್ಳ ಬಂದಿರಬಹುದು ಎಂದು ಗಾಯಗೊಂಡ ಗೊಂಪಾ ಚೋಡೇಕ್ ಕುಗಾಡಲು ಆರಂಭಿಸಿ ಒಳಗೆ ಓಡಿಹೋಗಿದ್ದಾನೆ.
ಅಷ್ಟರಲ್ಲಿ ಮೃತಪಟ್ಟ ವ್ಯಕ್ತಿ ಜಮ್ಯಾಂಗ್ ಲಾಕ್ಪಾ ಎಂಬುವನು ತನ್ನ ಕೈಯಲ್ಲಿರು ಚಾಕುವಿನಿಂದ ಗಾಯಗೊಂಡ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಆರಂಭಿಸುತ್ತಾನೆ ನಂತರ ಮಾಜಿ ಸೈನಿಕ ಗಾಯಗೊಂಡವನು ಕೂಡ ಚಾಕುವಿನಿಂದ ಹಲ್ಲೆ ಮಾಡಲುವಾರಂಬಿಸಿದಾಗ ಇಬ್ಬರ ನಡುವೆ ಜಗಳವಾದ ಮೇಲೆ ಜಮ್ಯಾಂಗ್ ಲಾಕ್ಪಾ ಚಾಕು ಇರಿತಕ್ಕೆ ಮೃತಪಟ್ಟರೆ.ಗೊಂಪಾ ಚೋಡೇಕ್ ಗಂಭೀರ ಗಾಯಗೊಂಡು ಆಸ್ಪತ್ರೇಗೆ ದಾಖಲಾಗಿರುತ್ತಾನೆ. ಇವರಿಬ್ಬರ ನಡುವೆ ಯಾವ ವಿಷಯಕ್ಕೆ ಜಗಳ ನಡೆದಿದೆ ಎಂದು ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯ ಬೇಕಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.