ಆಕಸ್ಮಿಕವಾಗಿ ಕೊಟ್ಟಿಗೆಗೆ ತಗುಲಿದ ಬೆಂಕಿ, ಏಳು ಜಾನುವಾರುಗಳು ಸುಟ್ಟು ಭಸ್ಮ

ಹೊಸದಿಗಂತ ವರದಿ ಮುಂಡಗೋಡ:

ಆಕಸ್ಮಿಕವಾಗಿ ಜಾನುವಾರ ಕೊಟ್ಟಿಗೆಗೆ ಬೆಂಕಿ ತಗುಲಿ ಏಳು ಜಾನುವಾರಗಳು ಸುಟ್ಟು ಕರಕಲಾದ ಘಟನೆ ಪಟ್ಟಣದ ಹಳೂರ ಓಣೆಯಲ್ಲಿ ಗುರುವಾರ ಬೆಳಗಿನ ಜಾವ ಜರುಗಿದೆ.
ಪಟ್ಟಣದ ಹಳೂರ ಓಣೆಯ ಮಂಜುನಾಥ ಶೇಟ್ ಎಂಬುವರಿಗೆ ಸೇರಿದ ಜಾನುವಾರುಗಳು ಸುಟ್ಟು ಕರಕಲಾಗಿವೆ.
ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.

ಎಂದಿನಂತೆ ಮನೆಯವರು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ಕಟ್ಟಿದ್ದಾರೆ ಗುರುವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕೊಟ್ಟಿಗೆಯಲ್ಲಿ ಬೆಂಕಿ ತಗುಲಿ‌ ಕೊಟ್ಟಿಗೆಯಲ್ಲಿದ್ದ ಕಟ್ಟಿಗೆ ಹಂಚುಗಳು ಸಿಡಿಯುತ್ತಿರುವ ಶಬ್ದ ಕೇಳಿ ಕೂಡಲೆ ಅಕ್ಕ ಪಕ್ಕದವರು ಸ್ಥಳಕ್ಕೆ ಆಗಮಿಸಿದ್ದಾರೆ.

ಹಳೂರ ಓಣಿಯಲ್ಲೆ ಇರುವ ಸ್ಥಳಿಯರು, ಜಾನುವಾರದ ಮಾಲಿಕರು ಹಾಗೂ ಶೌರ್ಯ ವಿಪತ್ತು ನಿರ್ವಹಣೆ ಘಟಕ ಸದಸ್ಯರು ಬೆಂಕಿ ನಂದಿಸಲು ಮುಂದಾದರು ಹತೋಟಿಗೆ ಬರಲಿಲ್ಲ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು 2-3 ತಾಸಿನವರೆಗೆ ಕಾರ್ಯಾಚರಣಿ ನಡೆಸಿದರು ಅಷ್ಟರಲ್ಲಿ ಮೂರು ಕರುಗಳು ಸೇರಿ ನಾಲ್ಕು ಆಕಳು ಬೆಂಕಿಗೆ ಆಹುತಿಯಾಗಿ ಪ್ರಾಣ ಕಳೆದುಕೊಂಡಿವೆ. ಈ ಅವಘಡದಿಂದ ಅಕ್ಕ ಪಕ್ಕದ ಮನೆಗಳಿಗೆ ಹಾನಿಯಾಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!