ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಭಾಸ್ ಅವರ ಹುಟ್ಟುಹಬ್ಬವನ್ನು ಆಂಧ್ರಪ್ರದೇಶದ ಚಿತ್ರಮಂದಿರದಲ್ಲಿ ಆಚರಿಸುತ್ತಿದ್ದ ವೇಳೆ ಪಟಾಕಿ ಸಿಡಿದು ಅವಘಡ ನಡೆದಿದೆ.
ಬಾಹುಬಲಿ ಖ್ಯಾತಿಯ ನಟನ 43 ನೇ ಹುಟ್ಟುಹಬ್ಬವನ್ನು ಆಚರಿಸಲು ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟ್ರಮಣ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಿತು.ಈ ವೇಳೆ ಹಚ್ಚಿದ್ದ ಪಟಾಕಿ ಸಿಡಿದು ಚಿತ್ರಮಂದಿರದ ಆಸನಕ್ಕೆ ಬೆಂಕಿ ತಗುಲಿದೆ.
ಬೆಂಕಿಯು ಹಲವಾರು ಆಸನಗಳನ್ನು ಆವರಿಸಿದ್ದು, ಚಿತ್ರಮಂದಿರಲ್ಲಿ ದಟ್ಟ ಹೊಗೆ ಆವರಿಸಿತ್ತು,. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.