ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಕೂಲ್‌ಬ್ಯಾಗ್‌ನಲ್ಲಿ ಗನ್ ತಂದು ತನ್ನದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಐದು ವರ್ಷದ ಬಾಲಕ ಗುಂಡು ಹಾರಿಸಿದ್ದಾನೆ.
ಉತ್ತರ ಬಿಹಾರ ಜಿಲ್ಲೆಯ ಸುಪೌಲ್‌ನಲ್ಲಿ ಐದು ವರ್ಷದ ಬಾಲಕನೊಬ್ಬ 3ನೇ ತರಗತಿಯ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನರ್ಸರಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನ ಬ್ಯಾಗ್‌ನಲ್ಲಿ ಬಂದೂಕನ್ನು ಬಚ್ಚಿಟ್ಟುಕೊಂಡು ಶಾಲೆಗೆ ಆಗಮಿಸಿದ್ದು, ಅದೇ ಶಾಲೆಯ ಮೂರನೇ ತರಗತಿ ಬಾಲಕನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಬಾಲಕನ ತೋಳಿಗೆ ತಗುಲಿ ರಕ್ತ ಚಿಮ್ಮಿದೆ. ಬಾಲಕನ ಬ್ಯಾಗ್‌ನಲ್ಲಿ ಗನ್ ಹೇಗೆ ಬಂತು, ಅದನ್ನು ಚಲಾಯಿಸಲು ಮಗುವಿಗೆ ಹೇಗೆ ತಿಳಿಯಿತು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.