January22, 2026
Thursday, January 22, 2026
spot_img

ಓಮನ್​​​ನಲ್ಲಿ ಮೋದಿಗೆ ಆತ್ಮೀಯ ವಿದಾಯ: ಮೂರು ದೇಶಗಳ ಪ್ರವಾಸ ಮುಗಿಸಿ ದೆಹಲಿಯತ್ತ ಹೊರಟ ಪ್ರಧಾನಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಓಮನ್​ ಐತಿಹಾಸಿಕ ಭೇಟಿಯನ್ನು ಮುಗಿಸಿ ದೆಹಲಿಗೆ ವಾಪಾಸ್ ಹೊರಟಿದ್ದಾರೆ. ಈ ವೇಳೆ ಓಮನ್ ಸುಲ್ತಾನರ ಸಹೋದರ ‘ನಮಸ್ತೆ’ ಎಂದು ಕೈ ಮುಗಿದು, ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಬೀಳ್ಕೊಟ್ಟಿದ್ದಾರೆ.

ಒಟ್ಟು 3 ದೇಶಗಳ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ 4 ದಿನಗಳ ಬಳಿಕ ಇದೀಗ ದೆಹಲಿಗೆ ವಾಪಾಸಾಗುತ್ತಿದ್ದಾರೆ.

ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಸಹೋದರ ಮತ್ತು ಸುಲ್ತಾನರ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದಾಯ ಹೇಳಿದರು. ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧ ಮತ್ತು ಅವರ ಆತ್ಮೀಯ ಸೌಹಾರ್ದತೆಯನ್ನು ಎತ್ತಿ ತೋರಿಸುತ್ತಾ, ಇಬ್ಬರೂ ನಾಯಕರು ಕೈಕುಲುಕಿ ಪರಸ್ಪರ ಅಪ್ಪಿಕೊಂಡರು.

Must Read