September 18, 2026
Friday, September 18, 2026
spot_img

ದೇಶದ ಮೊದಲ ಅತಿ ವೇಗದ ಮೆಟ್ರೋ, ʻನಮೋ ಭಾರತ್ʼ ಕಾರಿಡಾರ್‌ ಗೆ ಪ್ರಧಾನಿ ಮೋದಿ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅತಿ ವೇಗದ ಮೆಟ್ರೋ ಸೇವೆ ʻನಮೋ ಭಾರತ್‌ʼ ಕಾರಿಡಾರ್‌ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದ ಮೀರತ್ ನಲ್ಲಿ ಚಾಲನೆ ನೀಡಿದರು. ಈ ಮೂಲಕ, ದೆಹಲಿ-ಮೀರತ್ ನಡುವಿನ ನಮೋ ಭಾರತ್ ಕಾರಿಡಾರ್ ಯೋಜನೆ ಸಂಪೂರ್ಣಗೊಂಡಂತಾಗಿದೆ.

ಇದು ದೇಶದ ಮೊದಲ ನಮೋ ಭಾರತ್ ಯೋಜನೆಯಾಗಿದೆ. ಇವುಗಳಲ್ಲಿ ದೆಹಲಿಯ ಸರಾಯ್ ಕೇಲ್ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿಲೋಮೀಟರ್​ ವಿಭಾಗ ಮತ್ತು ಮೀರತ್ ದಕ್ಷಿಣ ಮತ್ತು ಉತ್ತರ ಪ್ರದೇಶದ ಮೋದಿಪುರಂ ನಡುವಿನ 21 ಕಿಮೀ ವಿಭಾಗವೂ ಸೇರಿವೆ.

ನಮೋ ಭಾರತ್ ಮಾರ್ಗವು ಒಟ್ಟು 82.15 ಕಿಮೀ ಉದ್ದ ಹೊಂದಿದೆ. ಅದರಲ್ಲಿ ಸುಮಾರು 70 ಕಿಮೀ ಎತ್ತರ ಪ್ರದೇಶದಲ್ಲಿದ್ದರೆ, 12 ಕಿಮೀ ಸುರಂಗ ಮಾರ್ಗ ಹೊಂದಿದೆ. ದೆಹಲಿಯ ಸರಾಯ್ ಕೇಲ್ ಖಾನ್​​ನಿಂದ ಮೀರತ್‌ನ ಮೋದಿಪುರಂ ಸಂಪರ್ಕಿಸುವ ಈ ಮಾರ್ಗವನ್ನು ಈಗ ಕೇವಲ 55 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಈ ಮಾರ್ಗ ಮೆಟ್ರೋ ಗಂಟೆಗೆ 120 ಕಿಮೀ ವೇಗದಲ್ಲಿ ಸಂಚರಿಸಲಿದೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಹಿಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಹೆಲಿಕಾಪ್ಟರ್​ನಲ್ಲಿ ಶತಾಬ್ದಿ ನಗರ ನಿಲ್ದಾಣಕ್ಕೆ ಆಗಮಿಸಿ, ನಮೋ ಭಾರತ್ ರೈಲು ಮತ್ತು ಮೀರತ್ ಮೆಟ್ರೋಗೆ ಹಸಿರು ನಿಶಾನೆ ತೋರಿಸಿದರು. ಪ್ರಧಾನಿ ಮೋದಿ, ಸಿಎಂ ಯೋಗಿ ಅವರು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾರ್ವಜನಿಕರ ಜೊತೆಗೂಡಿ ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚರಿಸಿ ಮಾತುಕತೆ ನಡೆಸಿದರು.

ಅತಿ ವೇಗದ ಮೆಟ್ರೋದ ವಿಶೇಷತೆ:
ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ನಮೋ ಭಾರತ್ ಕಾರಿಡಾರ್​ನ ಭಾಗವಾಗಿದೆ. ದೆಹಲಿ ಮತ್ತು ಮೀರತ್ ನಡುವೆ ಹೈ-ಸ್ಪೀಡ್ ಮೆಟ್ರೋ, ಹೈ-ಫ್ರೀಕ್ವೆನ್ಸಿ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.ದೆಹಲಿಯಿಂದ ಮೀರತ್​ವರೆಗಿನ 82 ಕಿಮೀ ದೂರವನ್ನು ಕೇವಲ 55 ನಿಮಿಷಗಳಲ್ಲಿ ಇದು ಕ್ರಮಿಸುತ್ತದೆ. ಈ ರೈಲುಗಳು ಆಧುನಿಕ ಸುರಕ್ಷತಾ ವ್ಯವಸ್ಥೆಗಳು, ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಅಂತರ್ಗತ ವಿನ್ಯಾಸವನ್ನು ಒಳಗೊಂಡಿವೆ.

ಸರೈಕಲೇಖಾನ್ (ದೆಹಲಿ) ನಿಂದ ಮೋದಿಪುರಂ (ಉತ್ತರಪ್ರದೇಶ) ವರೆಗೆ 82.15 ಕಿ.ಮೀ.ಸಂಚರಿಸಲಿದ್ದು, ನ್ಯೂಅಶೋಕ್‌ನಗರ, ಆನಂದ್‌ವಿಹಾರ್, ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ, ಮುರಾದ್‌ನಗರ, ಮೋದಿನಗರದಕ್ಷಿಣ, ಮೋದಿನಗರಉತ್ತರ, ಮೀರತ್‌ದಕ್ಷಿಣ, ಶತಾಬ್ದಿನಗರ, ಬೇಗಂಪುಲ್ ಮತ್ತು ಮೋದಿಪುರಂ ಸೇರಿದಂತೆ
16 ನಿಲ್ದಾಣಗಳಲ್ಲಿ ನಿಲ್ಲಲಿದೆ. ಗಂಟೆಗೆ 180 ಕಿಮೀ ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ. ಸರಾಸರಿ ವೇಗ ಗಂಟೆಗೆ 90 ಕಿಮೀ.

ಸುರಕ್ಷತಾ ಕ್ರಮಗಳು: ಬಾಗಿಲುಗಳ ಬಳಿ ವ್ಹೀಲ್‌ಚೇರ್ ಇಡಲು ಸ್ಥಳ, ಪ್ಲಾಟ್​ಫಾರ್ಮ್​ ಸ್ಕ್ರೀನ್​ ಡೋರ್ಸ್​, ಪುಶ್ ಬಟನ್ ಡೋರ್ಸ್​, ಪ್ರೀಮಿಯಂ ಕೋಚ್ ಮತ್ತು ಮಹಿಳೆಯರಿಗೆ ವಿಶೇಷ ಕೋಚ್ ವ್ಯವಸ್ಥೆ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !