ಹೊಸದಿಂತ ಡಿಜಿಟಲ್ ಡೆಸ್ಕ್:
ಉಚಿತ ಬಸ್ ಪ್ರಯಾಣದ ದುರುಪಯೋಗ ಪಡೆದ ಬಾಲಕಿಯೊಬ್ಬಳು ಬರೋಬ್ಬರಿ 33 ಗಂಟೆ ಬಸ್‌ಗಳಲ್ಲಿ ಪ್ರಯಾಣಿಸಿ ಪೋಷಕರನ್ನು ಆತಂಕಕ್ಕೆ ತಳ್ಳಿದ ವಿದ್ಯಮಾನ ತೆಲಂಗಾಣದಲ್ಲಿ ನಡೆದಿದೆ.
ಪೊಲೀಸ್ ಮಾಹಿತಿಗಳ ಪ್ರಕಾರ ಈ ಬಾಲಕಿ ಹಾಸ್ಟೆಲ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಈ ಕೃತ್ಯ ನಡೆಸಿದ್ದಾಳೆ.
ವಿದ್ಯಾರಣ್ಯಪುರಿ ನಿವಾಸಿ ಈ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದುಕೊಂಡು ಹೈಸ್ಕೂಲ್ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಈಕೆ ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿನ ತನ್ನ ತಾತನ ಮನೆಗೆ ಬಂದಿದ್ದ ಈಕೆಗೆ ರಜೆ ಮುಗಿಸಿ ಮತ್ತೆ ಹಾಸ್ಟೆಲ್‌ಗೆ ಹೋಗಲು ಇಷ್ಟವಾಗಿಲ್ಲ. ಇದಕ್ಕಾಗಿ ಆಕೆ ಫ್ರೀ ಬಸ್ ಯೋಜನೆಯಲ್ಲಿ ಬಸ್ ಮೇಲೆ ಬಸ್ ಬದಲಾಯಿಸುತ್ತಾ ಸುಮಾರು ೩೩ ಗಂಟೆ ಪ್ರಯಾಣ ಮಾಡಿದ್ದಾಳೆ. ಇತ್ತ ಬಾಲಕಿ ಹಾಸ್ಟೆಲ್‌ಗೆ ಬಾರದಿರುವುದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸತತ ಕಾರ್ಯಾಚರಣೆ ಬಳಿಕ ಆಕೆಯನ್ನು ಪತ್ತೆಹಚ್ಚಿ ಇದೀಗ ಪೋಷಕರಿಗೆ ಒಪ್ಪಿಸಲಾಗಿದೆ.