ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಬಹುಕೋಟಿ ಹಿಂದೂಗಳ ಕನಸು ನನಸಾಗಲಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈಗಾಗಲೇ ರಾಮಮಂದಿರದ ಗರ್ಭಗುಡಿಯ ಮೇಲಿನ ಮಹಡಿಯಲ್ಲಿ ಬಾಗಿಲೊಂದನ್ನು ಇರಿಸಲಾಗಿದೆ.
ಇದರ ವಿಶೇಷತೆ ಏನೆಂದರೆ ಇದು 100 ಕೆಜಿ ತೂಕದ ಬಂಗಾರ ಲೇಪಿತವಾದ ಬಾಗಿಲು. ಈ ಬಾಗಿಲು ಒಟ್ಟಾರೆ 12 ಅಡಿ ಎತ್ತರ ಹಾಗೂ ಎಂಟು ಅಡಿ ಅಗಲವಿದೆ. ಇನ್ನೇನು ಮೂರು ದಿನಗಳಲ್ಲಿ ಬಂಗಾರ ಲೇಪಿತ ಬಾಗಿಲನ್ನು ಗರ್ಭಗುಡಿಯಲ್ಲಿಸ್ಥಾಪನೆ ಮಾಡಲಾಗುತ್ತದೆ. ಇಡೀ ದೇಗುಲದಲ್ಲಿ ಒಟ್ಟಾರೆ 46 ಬಾಗಿಲುಗಳಿವೆ.
ಬೇರೆ ಬೇರೆ ವಿಭಿನ್ನ ಚಿತ್ರಗಳನ್ನು ಹೊಂದಿರುವ ಬಾಗಿಲುಗಳು ಮತ್ತೊಂದು ಪ್ರಮುಖ ಆಕರ್ಷಣೆಯಾಗಲಿವೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರಿಗೆ ಆಹ್ವಾನ ನೀಡಲಾಗಿದೆ.