ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026ನೇ ಸಾಲಿನ ವಾರ್ಷಿಕ ಆಟಗಾರರ ಒಪ್ಪಂದಕ್ಕೆ ತಯಾರಿ ನಡೆಸುತ್ತಿದ್ದು, ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬಾರಿ ‘ಗ್ರೇಡ್’ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, ಇದು ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನಮಾನದ ಮೇಲೆ ನೇರ ಪರಿಣಾಮ ಬೀರಲಿದೆ.
ಈ ಬಾರಿ ಬಿಸಿಸಿಐ ಪಟ್ಟಿಯಿಂದ ‘A+’ ಗ್ರೇಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದೆ. ಕೇವಲ A, B ಮತ್ತು C ಎಂಬ ಮೂರು ವಿಭಾಗಗಳು ಮಾತ್ರ ಇರಲಿವೆ.
ಈ ಹಿಂದೆ ಉನ್ನತ ಮಟ್ಟದ (A+) ಗ್ರೇಡ್‌ನಲ್ಲಿದ್ದ ರೋಹಿತ್ ಮತ್ತು ವಿರಾಟ್ ಅವರನ್ನು ಈಗ ‘B’ ಗ್ರೇಡ್‌ಗೆ ಇಳಿಸಲಾಗಿದೆ.
ಗ್ರೇಡ್ ಬದಲಾವಣೆಯಿಂದಾಗಿ ಇಬ್ಬರು ದಿಗ್ಗಜರ ವಾರ್ಷಿಕ ಆದಾಯದಲ್ಲಿ ಭಾರಿ ಇಳಿಕೆಯಾಗಲಿದೆ. ಈ ಹಿಂದೆ 5 ಕೋಟಿ ರೂ. ಪಡೆಯುತ್ತಿದ್ದ ಇವರಿಗೆ, ಇನ್ನು ಮುಂದೆ ವಾರ್ಷಿಕ 3 ಕೋಟಿ ರೂ. ಸಂಭಾವನೆ ಮಾತ್ರ ಸಿಗಲಿದೆ.
ಈ ಬಾರಿಯ ‘A’ ಗ್ರೇಡ್ ಪಟ್ಟಿಯಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ:
ಶುಭ್ಮನ್ ಗಿಲ್
ಜಸ್ಪ್ರೀತ್ ಬುಮ್ರಾ
ರವೀಂದ್ರ ಜಡೇಜಾ
ಬಿಸಿಸಿಐನ ಈ ನಡೆ ರೋಹಿತ್ ಮತ್ತು ವಿರಾಟ್ ಅವರ ಯುಗಾಂತ್ಯದ ಸಂಕೇತ ಎನ್ನಲಾಗುತ್ತಿದೆ. 2027ರ ಏಕದಿನ ವಿಶ್ವಕಪ್ ನಂತರ ಈ ಇಬ್ಬರು ದಿಗ್ಗಜರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ದಟ್ಟವಾಗಿದ್ದು, ಅದಕ್ಕೆ ಪೂರಕವಾಗಿಯೇ ಈ ಆರ್ಥಿಕ ಮತ್ತು ಶ್ರೇಣಿಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.



