Wednesday, November 5, 2025

ಅದ್ದೂರಿ ದೇವ ದೀಪಾವಳಿ ಸಂಭ್ರಮ: ಗಂಗಾ ಘಾಟ್​​ನಲ್ಲಿ ಬೆಳಗಿದ 25 ಲಕ್ಷ ದೀಪಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇಂದು ಕಾರ್ತಿಕ ಪೂರ್ಣಿಮೆ ಸಂಭ್ರಮ. ಈ ದಿನ ವಾರಾಣಸಿ, ಕಾಶಿಯಲ್ಲಿ ದೇವ ದೀಪಾವಳಿ ಆಚರಿಸಲಾಗುತ್ತಿದೆ. ವಾರಾಣಸಿಯ ಗಂಗಾ ಘಾಟ್‌ಗಳಲ್ಲಿ ದೇವ ದೀಪಾವಳಿ ಆಚರಣೆಗಳು ಪ್ರಾರಂಭವಾಗಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಮೋ ಘಾಟ್‌ನಲ್ಲಿ ಮೊದಲ ದೀಪ ಬೆಳಗಿಸಿದರು. ಕಾಶಿಯ 84 ಘಾಟ್‌ಗಳಲ್ಲಿ 25 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ 15 ಲಕ್ಷ ದೀಪಗಳನ್ನು ವ್ಯವಸ್ಥೆ ಮಾಡಿದೆ. ಸಮಿತಿಗಳು ಮತ್ತು ಕಾಶಿ ನಿವಾಸಿಗಳು 1 ಲಕ್ಷ ದೀಪಗಳನ್ನು ವ್ಯವಸ್ಥೆ ಮಾಡಿದ್ದಾರೆ.

error: Content is protected !!