October 16, 2026
Friday, October 16, 2026
spot_img

ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಸರ್ಕಾರಿ ನೌಕರರ ಸಂಬಳಕ್ಕೆ ಬಿತ್ತು ಕತ್ತರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದಾಗಿ ಈಗಾಗಲೇ ಅನೇಕ ದೇಶಗಳಿಗೆ ಬಿಸಿ ಮುಟ್ಟಿದ್ದು, ಇದಕ್ಕೆ ಪಾಕಿಸ್ತಾನ ಕೂಡ ಹೊರತಲ್ಲ.

ಈಗಾಗಲೇ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿರುವ ಪಾಕ್ ನಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು, ಸಾಲದ ಮೇಲೆ ಸಾಲದಿಂದಾಗಿ ದೇಶದ ಖಜಾನೆ ಬರಿದಾಗುತ್ತಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಖರ್ಚು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸಿದೆ.

ಈ ಕುರಿತು ಖುದ್ದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮಾಹಿತಿ ನೀಡಿದ್ದು, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಸಂಬಳದಲ್ಲಿ ಶೇ. 5 ರಿಂದ 30ರಷ್ಟು ಕಡಿತ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಜೊತೆಗೆ ಸರ್ಕಾರಿ ವಾಹನಗಳಿಗೆ ನೀಡುವ ಇಂಧನ ಕೋಟಾದಲ್ಲಿ ಶೇ. 50ರಷ್ಟು ಕಡಿತ ಮಾಡಲಾಗಿದೆ. ಅದೇ ರೀತಿ ಮುಂದಿನ ಎರಡು ತಿಂಗಳಲ್ಲಿ ಶೇ. 60ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಲು ನಿರ್ಧರಿಸಿದೆ.

Must Read