ಕಲಬುರಗಿ ಪೋಲಿಸ್ ಆಯುಕ್ತಾಲಯಕ್ಕೆ ತಂದ ನೂತನ ಶ್ವಾನಗಳಿಗೆ ನಡೆಯಿತು ಅದ್ದೂರಿ ನಾಮಕರಣ!

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ ನಗರ ಪೋಲಿಸ್ ಆಯುಕ್ತಾಲಯದ ಮನವಿಯಂತೆ ಕಲಬುರಗಿ ನಗರ ಪೋಲಿಸ್ ಆಯುಕ್ತಾಲಯಕ್ಕೆ ಐದು ನೂತನ ಶ್ವಾನಗಳು ಮಂಜೂರಾಗಿದ್ದು, ಮಂಜೂರಾದ ನೂತನ ಶ್ವಾನಗಳಿಗೆ ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಸೇರಿದಂತೆ ಇತರೆ ಅಧಿಕಾರಿಗಳು ಸೋಮವಾರ ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ನಾಮಕರಣ ಮಾಡಿದರು.

ಅಪರಾಧಗಳ ಪತ್ತೆಗಾಗಿ (೨) ಶ್ವಾನ ರೀಟಾ, ರೂಬಿ, ಸ್ಪೋಟಕ ವಸ್ತುಗಳ ಪತ್ತೆಗಾಗಿ (೨) ಶ್ವಾನ ಸ್ಪಾರ್ಕಿ, ಸ್ಪೂರ್ತಿ ಹಾಗೂ ಮಾದಕ ವಸ್ತುಗಳ ಪತ್ತೆಗಾಗಿ (೧) ಲಿಯೋ ಸೇರಿದಂತೆ ಒಟ್ಟು ಐದು ನೂತನ ಶ್ವಾನಗಳಿಗೆ ಸೋಮವಾರ ನಾಮಕರಣ ಕಾರ್ಯಕ್ರಮ ಕೈಗೊಳ್ಳಲಾಯಿತು.

ಈ ಹಿಂದೆ ಕಲಬುರಗಿ ನಗರಕ್ಕೆ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಆರ್.ಹಿತೇಂದ್ರ ಭೇಟಿ ನೀಡಿದಾಗ ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಅವರು ನಗರ ಪೋಲಿಸ್ ಆಯುಕ್ತರ ಘಟಕಕ್ಕೆ ನೂತನ ಶ್ವಾನದಳ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.ಸಲ್ಲಿಸಿದ ಮನವಿಯಂತೆ ಐದು ಶ್ವಾನಗಳು ಮಂಜೂರಾಗಿದ್ದು, ಅವುಗಳಿಗೆ ನೂತನವಾಗಿ ನಾಮಕರಣ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಲಬುರಗಿ ನಗರ ಪೋಲಿಸ್ ಆಯುಕ್ತರು ತಿಳಿಸಿದ್ದಾರೆ.

ಸದರಿ ಶ್ವಾನಗಳು ಬೆಂಗಳೂರಿನ ಸಿ.ಎ.ಆರ್.ಸೌಥ್ ಆಡುಗೋಡಿಯಲ್ಲಿ ೯ ತಿಂಗಳ ತರಬೇತಿ ಪಡೆದು ಕಲಬುರಗಿ ನಗರ ಪೋಲಿಸ್ ಸೇವೆಗೆ ಸಜ್ಜುಗೊಳ್ಳಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!