February 3, 2026
Tuesday, February 3, 2026
spot_img

ಯಾದಗಿರಿಯಲ್ಲಿ ವಿರಾಟ್ ಹಿಂದೂ ಸಮ್ಮೇಳನದ ಅದ್ದೂರಿ ಶೋಭಾಯಾತ್ರೆ

ಹೊಸ ದಿಗಂತ ವರದಿ,ಯಾದಗಿರಿ:

ನಗರದಲ್ಲಿ ಶನಿವಾರ ಬೃಹತ್ ವಿರಾಟ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ಅತ್ಯಂತ ಸಡಗರದೊಂದಿಗೆ ಚಾಲನೆ ದೊರೆಯಿತು.

ನಗರದ ಮೈಲಾಪುರ ಬೇಸ್ ನಿಂದ ವನಿಕೇರಿ ಲೇಔಟ್ ವರೆಗೆ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡು‌ ಮೆರಗು ತಂದರು. ದೇಶಭಕ್ತಿಗೀತೆಗಳೊಂದಿಗೆ ರಾಷ್ಟ್ರ ಭಕ್ತರ ಭವ್ಯ ಭಾವಚಿತ್ರದ ಮೆರವಣಿಗೆ ರೋಮಾಂಚನ ತರಿಸಿತು.

ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಭಾಗವಾಧ್ವಜಗಳು, ದೊಡ್ಡ ಪ್ರಮಾಣದ ಬ್ಯಾನರ್ ಗಳಿಂದ ನಗರಕ್ಕೆ ನಗರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸಿತು. ಪ್ರಭು ಶ್ರೀರಾಮಚಂದ್ರನ ಸ್ಮರಣೆಯ ಭಕ್ತಿಗೀತೆಗಳು ವಿವಿಧ ಭಜನಾ ಮಂಡಳಿಗಳಿಂದ ಪ್ರಸ್ತುತ ಪಡಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !