ಗ್ಯಾರೆಂಟಿ ಗ್ಯಾರೆಂಟಿ ಅಂತಾರೆ, ಆದ್ರೆ ಜನರ ಜೀವನಕ್ಕೇ ಗ್ಯಾರೆಂಟಿ ಇಲ್ವಲ್ಲ: ಯತ್ನಾಳ್

ದಿಗಂತ ವರದಿ ವಿಜಯಪುರ:

ಗ್ಯಾರಂಟಿ ಗ್ಯಾರಂಟಿ ಎಂದು ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ವಿಧಾನ ಸಭೆ ವಿಸರ್ಜನೆ ಮಾಡಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಉತ್ನಾಳ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ತಡೆಯೊಕೆ ಆಗದೆ ಇದ್ದರೆ ವಿಧಾನಸಭೆ ವಿಸರ್ಜಿಸಲಿ. ಗ್ಯಾರಂಟಿ ಆಸೆ ಹಚ್ಚಿ ಲೋಕಸಭೆ ಗೆಲ್ತೀನಿ ಅನ್ನೋದು ಮೂರ್ಖತನ ಎಂದು ದೂರಿದರು.

ಸರಿಯಾಗಿ ತನಿಖೆ ಮಾಡಲು ಆಗದೆ ಇದ್ದರೆ, ಮುಂದೆ ದೊಡ್ಡ ಘಟನೆಯಾಗಬಹುದು. ರಾಮೇಶ್ವರಂ ಹೊಟೇಲ್‌ನಲ್ಲಿ ನಡೆದಿದ್ದು ಒಂದು ಪ್ರಯೋಗ ಎಂದರು.

ರಾಜ್ಯ ಭಯೋತ್ಪಾದಕರ ಪ್ರಯೋಗ ಶಾಲೆಯಾಗಿದೆ, ಇದಕ್ಕೆ ಅವಕಾಶ ಕೊಡಬಾರದು. ಆಗದೆ ಇದ್ದರೆ ಮನೆಗೆ ಹೋಗಿ ಎಂದು ಕಿಡಿಕಾರಿದರು.

ಶುಕ್ರವಾರದ ದಿನವೇ ರಾಮೇಶ್ವರಂ ಹೆಸರಿನ ಹೊಟೇಲ್ ಟಾರ್ಗೆಟ್ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಿದ ಬಳಿಕ ಹೀಗೆ ಮಾಡ್ತಿದ್ದಾರೆ. ಭಯೋತ್ಪಾದಕರ ನಾಶವಾಗುವ ಟೈಂ ಬಂದಿದೆ. ವಿಶೇಷ ಸೌಲಭ್ಯ ತೆಗೆಯಬೇಕು. ದೇಶದಲ್ಲಿ‌ ಸಮಾನ ನಾಗರಿಕ ಸಂಹಿತೆ ಬರಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!