July 27, 2026
Monday, July 27, 2026
spot_img

ದೇವಾಲಯದ ಆವರಣದಲ್ಲಿ ತಲೆ‌ ಎತ್ತಿದ ಸಮಾಧಿ! ಪ್ರತಿಭಟನೆಗೆ ಹಿಂದೂ‌ ಹಿತರಕ್ಷಣಾ ಸಮಿತಿ ಕರೆ

ಹೊಸದಿಗಂತ ವರದಿ ಮಡಿಕೇರಿ:

ವೀರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಮತ್ತೂರು ಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಅನಧಿಕೃತವಾಗಿ ಸಮಾಧಿ (ಗೋರಿ)ಯೊಂದು ನಿರ್ಮಾಣವಾಗಿದೆ.
ಈ ಪ್ರಕರಣದಿಂದ ಹಿಂದೂ ಸಮಾಜ ಆಘಾತಕ್ಕೊಳಗಾಗಿದ್ದು, ಘಟನೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಹಿಂದೂ ಸುರಕ್ಷಾ ಸಮಿತಿಯು, ಸೋಮವಾರ ಪ್ರತಿಭಟನೆಗೆ ಕರೆ ನೀಡಿದೆ.

ಈ ಕೃತ್ಯದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿರುವ ಸಮಿತಿಯು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಸೋಮವಾರ (ಇಂದು) ಬೆಳಗ್ಗೆ 10 ಗಂಟೆಗೆ ದೇವಾಲಯದ ಕಮಾನು ಬಳಿ ನಡೆಯಲಿರುವ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲೆ ಹಾಗೂ ಪಿರಿಯಾಪಟ್ಟಣ ಸುತ್ತಮುತ್ತಲಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿಂದೂ ಹಿತರಕ್ಷಣಾ ಸಮಿತಿಯ ಕೊಡಗು ಘಟಕ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !