RECIPE| ಮಂಡಿ ನೋವಿಗೆ ಮದ್ದು, ಬಹಳ ಬೇಗ ತಯಾರಾಗುವ ಆರೋಗ್ಯಕಾರಿ ಲಡ್ಡು ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕು. ಅಂತಹವುಗಳಲ್ಲಿ, ಖರ್ಜೂರ ಮತ್ತು ಎಳ್ಳು ಎರಡೂ ಬಹಳ ಮುಖ್ಯವಾದ ಪೌಷ್ಟಿಕ ಆಹಾರಗಳಾಗಿವೆ. ಎಳ್ಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹೆಚ್ಚಿನ ಕಬ್ಬಿಣದ ಅಂಶದಿಂದಾಗಿ, ರಕ್ತಹೀನತೆ ಕಡಿಮೆಯಾಗುತ್ತದೆ. ಆಲಸ್ಯ ಮತ್ತು ದುರ್ಬಲವಾಗಿರುವ ಜನರು ಎಳ್ಳು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಹಾಗಾಗಿ ಈ ಎರಡನ್ನೂ ಸೇರಿಸಿ ಲಡ್ಡು ತಯಾರಿಸುವುದರಿಂದ ತಿನ್ನಲೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಪದಾರ್ಥಗಳು

ಎಳ್ಳು-ಒಂದು ಕಪ್‌, ಖರ್ಜೂರ-ಒಂದುವರೆ ಕಪ್ಪು

ಮಾಡುವ ವಿಧಾನ

ಬಾಣಲೆಯಲ್ಲಿ ಒಂದು ಕಪ್ ಎಳ್ಳು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಾಡದಂತೆ ಹುರಿದು ಪಕ್ಕಕ್ಕೆ ಇರಿಸಿ. ನಂತರ ಒಂದೂವರೆ ಕಪ್ ಖರ್ಜೂರದ ಹಣ್ಣುಗಳನ್ನು ತೆಗೆದುಕೊಂಡು ಅವುಗಳಿಂದ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರ್ನಲ್ಲಿ ಹಾಕಿ. ಈ ಖರ್ಜೂರದ ಹಣ್ಣಿನ ತಿರುಳನ್ನು ಎಳ್ಳಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿದರೆ ಎಳ್ಳು,ಖರ್ಜೂರದ ಲಡ್ಡು ರೆಡಿ.

ಹೀಗೆ ತಯಾರಿಸಿದ ಲಡ್ಡೂಗಳನ್ನು ದಿನಕ್ಕೆ ಒಂದು ಬಾರಿ ತಿಂದರೆ ಸಾಕು ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಸಿಗುತ್ತದೆ. ಸಿಹಿ ಬೇಕಾದವರು ಬೆಲ್ಲ ಸೇರಿಸಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!