ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಸ್ಕಾಂ ನೌಕರನೋರ್ವ ಟ್ರಾನ್ಸ್ ಫಾರ್ಮರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರದ 51ನೇ ಸೆಕ್ಟರ್ ನಲ್ಲಿ ನಡೆದಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರಶು ಮಾಸ್ತಿ ಆತ್ಮಹತ್ಯೆ ಮಾಡಿಕೊಂಡ ಹೆಸ್ಕಾಂ ನೌಕರ. ವಿದ್ಯುತ್ ಪ್ರವಹಿಸಿ ಲೈನ್ಮೆನ್ ಸುಟ್ಟು ಕರಕಲಾಗಿದ್ದಾನೆ.
ಪರಶು ಮಾಸ್ತಿ ನವನಗರದ ಮೂಲದ ನಿವಾಸಿ. ಆತನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಸ್ಕಾಂ ನೌಕರ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.