Thursday, September 25, 2025

ಸಿಎಂ ಸಿದ್ದರಾಮಯ್ಯಗೆ ಭಾರೀ ಮುಖಭಂಗ: ಇಷ್ಟಕ್ಕೂ ಏನಾಯ್ತು, ಯಾಕಾಯ್ತು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ತೂರು ಜಂಕ್ಷನ್ ನಲ್ಲಿ ಟ್ರಾಫಿಕ್ ಸಮಸ್ಯೆ ಕಾರಣ ವಿಪ್ರೋ ಕ್ಯಾಂಪಸ್ ನಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಅಜೀಮ್ ಪ್ರೇಮ್ ಜೀ ತಿರಸ್ಕರಿಸಿದ್ದಾರೆ.

ಸಾರ್ವಜನಿಕ ರಸ್ತೆಗಾಗಿ ನಮ್ಮ ವಿಪ್ರೋ ಕ್ಯಾಂಪಸ್ ತೆರೆದಿಡಲು ಸಾಧ್ಯವಿಲ್ಲ. ಕ್ಯಾಂಪಸ್ SEZ ಆಗಿದ್ದು, ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನ ಹೊಂದಿದೆ. ನಾವು ನೇರವಾಗಿ ಸರ್ಕಾರದ ಮನವಿ ತಿರಸ್ಕಾರ ಮಾಡುವುದಿಲ್ಲ. ಆದ್ರೆ ಇದರ ಬಗ್ಗೆ ಹೆಚ್ಚುವರಿ ಚರ್ಚೆ ಮಾಡಬೇಕು. ಚರ್ಚೆ ಮಾಡಿದ್ರೆ ಮಾತ್ರ ಲಾಂಗ್ ಟರ್ಮ್‌ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಯವಾಗಿ ಸಿದ್ದರಾಮಯ್ಯನವರ ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯನವರಿಗೆ ನಿರಾಸೆಯಾಗಿದೆ.

ಇದು ಒಂದು ರಸ್ತೆ ಓಪನ್ ಮಾಡುವುದು ವಿಚಾರವಲ್ಲ. ಇದು ಒಂದು ಪ್ರಕ್ರಿಯೆ. ನಾವೂ ಕೂಡ ಸರ್ಕಾರಕ್ಕೆ ಬೆಂಬಲ ನೀಡಬೇಕು . ವೈಜ್ಞಾನಿಕವಾಗಿ ಇದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಲಾಂಗ್ ಟರ್ಮ್ ಆಗಿ ಸರ್ಕಾರಕ್ಕೆ ಬೆಂಬಲಿಸಬೇಕಾಗುತ್ತದೆ. ಈಗ ಸದ್ಯಕ್ಕೆ ಕ್ಯಾಂಪಸ್ ರಸ್ತೆ ಓಪನ್ ಮಾಡುವುದಕ್ಕೆ ಆಗಲ್ಲ. ಯಾಕಂದ್ರೆ ಇದು ಖಾಸಗಿ ಸ್ಥಳ. ಇದು ಎಕಾನಾಮಿಕ್ ಪರ್ಪಸ್ ಆಗಿರುವ ಸ್ಥಳ. ಹಾಗಂತ ನಾವು ನೇರವಾಗಿ ಸರ್ಕಾರದ ಮನವಿ ತಿರಸ್ಕಾರ ಮಾಡುವುದಿಲ್ಲ. ಆದ್ರೆ ಇದರ ಬಗ್ಗೆ ಹೆಚ್ಚುವರಿ ಚರ್ಚೆ ಮಾಡಬೇಕು. ಚರ್ಚೆ ಮಾಡಿದ್ರೆ ಮಾತ್ರ ಲಾಂಗ್ ಟರ್ಮ್‌ಸಮಸ್ಯೆ ಪರಿಹಾರ ಆಗುತ್ತದೆ ಎಂದು ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್ ಜೀ ತಿಳಿಸಿದ್ದಾರೆ.

ಇದನ್ನೂ ಓದಿ