ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಗುನ್ನೌರ್ ಟೌನ್‌ಶಿಪ್‌ನಲ್ಲಿ ನಡೆದ ಈ ಸ್ಫೋಟದಲ್ಲಿ ಏಳು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಡ್ಡೋ, ಅನಮ್, ಸುಮಯ್ಯ ಮೃತರು, ಇನ್ನೊಬ್ಬ ಅಪ್ರಾಪ್ತನ ಗುರುತು ತಿಳಿದು ಬಂದಿಲ್ಲ.
ಸಬೀರ್ ಅಲಿ ಎನ್ನುವವರಿಗೆ ಸೇರಿದ ಪಟಾಕಿ ಗೋದಾಮು ಇದಾಗಿದೆ, ಸ್ಫೋಟದ ಭೀಕರತೆಗೆ ಇಡೀ ಗೋದಾಮ ಅಲುಗಾಡಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.