ಹೊಸದಿಗಂತ ವರದಿ,ಗೋಕರ್ಣ:
ಭಾರೀ ಗಾತ್ರದ ತೊರ್ಕೆಮೀನು ಗಂಗಾವಳಿಯ ಮೀನುಗಾರ ಅನಿಲ್ ಗಂಗಾವಳಿ ಅವರು ಮಂಗಳವಾರ ಮೀನುಗಾರಿಕೆಗೆ ತೆರಳಿದಾಗ ದೊರೆತಿದೆ.
೮೦ ಕೆ.ಜಿ. ತೂಕವಿರುವ ಈ ಬೃಹತ್ ಮೀನು ಬಲೆಗೆ ಬಿದ್ದಿರುವುದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ತೀರ ಅಪರೂಪಕ್ಕೆ ದೊರೆಯುವ ಮೀನಿನ ಮಾಂಸವನ್ನು ಪಡೆಯಲು ಜನರು ಮುಗಿಬಿದ್ದಿದ್ದು ಕಂಡುಬಂತು.