ಹೊಸದಿಗಂತ ಯಲ್ಲಾಪುರ :
ಕಿರವತ್ತಿ- ಹೊಸಳ್ಳಿ ಗಾಂವಠಾಣ ಅಂಗನವಾಡಿ ಶಾಲೆ ಮೇಲೆ ಬೃಹತ್ ಮರ ಬಿದ್ದು ಶಾಲೆಗೆ ಅಪಾರ ಹಾನಿಯಾಗಿದೆ.
ಇಂದು ರವಿವಾರ ವಾಗಿರುವದರಿಂದ ಶಾಲೆಯಲ್ಲಿ ಯಾವುದೇ ಮಕ್ಕಳು ಇಲ್ಲದೇ ಇದ್ದರಿಂದ ಅದೃಷ್ಟ ವಶಾತ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಶಾಲೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಬೀಳುವ ಅಪಾಯದಲ್ಲಿರುವ ಮರವಿರುವುದು ಮತ್ತು ಇವುಗಳು ಅಪಾಯದ ಹಂತದಲ್ಲಿ ಇರುವುದನ್ನು ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು ಮಳೆಗಾಲ ಆರಂಭ ದಲ್ಲಿಯೇ ಜೂನ್ ನಲ್ಲಿ ಪಂಚಾಯತ್ ನೋಡಲ್ ಅಧಿಕಾರಿ ಮತ್ತು ಪಾರೇಸ್ಟ್ ಇಲಾಖೆಯ ಗಮನಕ್ಕೆ ತಂದಿದ್ದರು.
ನೋಡಲ್ ಅಧಿಕಾರ ಮತ್ತು ವಿಲೇಜ್ ಅಕೌಂಟೆಂಟ್ ಸ್ಥಳಕ್ಕೆ ಭೇಟಿನೀಡುವ ಮೂಲಕ ಅರಣ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದ್ದರು ಆದರೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೇ ಮಕ್ಕಳ ಜೀವನದ ಜೊತೆಗೆ ಚಲ್ಲಾಟವಾಡಿ ಕರ್ತವ್ಯ ಲೋಪ ಎಸಗಿರುವುದು ಸೃಷ್ಟವಾಗಿದೆ, ಆಗಬಹುದಾದ ಅನಾಹುತ ಭಗವಂತನ ಕೃಪೆಯಿಂದ ತಪ್ಪಿದೆ, ಕರ್ತವ್ಯ ಲೋಪ್ ಎಸಗಿದ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.