ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿ ಪ್ರಧಾನಿಯನ್ನು ಗೇಲಿ ಮಾಡಿದ ಪತ್ರಕರ್ತನಿಗೆ ಒಟ್ಟು 5.7 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ಪತ್ರಕರ್ತ ಗಿಯುಲಿಯಾ ಕೊರ್ಟೆಸೆ ಟ್ವೀಟ್ ಮೂಲಕ ವ್ಯಂಗ್ಯವಾಡುವುದು, ಅಣಕಿಸುವುದು ಮಾಡಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. 2021ರಿಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಟಾರ್ಗೆಟ್ ಮಾಡಿದ್ದ ಗಿಯುಲಿಯಾ ಎರಡು ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪತ್ರಕರ್ತ ಗಿಯುಲಿಯಾ, ಟ್ವೀಟ್ ಮೂಲಕ ಜಾರ್ಜಿಯಾ ಮೆಲೋನಿಯನ್ನು ಫ್ಯಾಸಿಸ್ಟ್ ನಾಯಕ ಬೆನಿಟೋ ಮುಸೋಲಿನ್‌ಗೆ ಹೋಲಿಕೆ ಮಾಡಿದ್ದರು. ಮೆಲೋನಿ ಹಾಗೂ ಬೆನಿಟೋ ಮುಸೋಲಿನ್ ಫೋಟೋವನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿರುದ್ದ ಕೋರ್ಟ್ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಮೆಲೋನಿ ಪಾರ್ಟಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಿಚಾರಣೆ ನಡೆದ ಪತ್ರಕರ್ತನಿಗೆ 5,000 ಯೂರೋ( ಭಾರತೀಯ ರೂಪಾಯಿಗಳಲ್ಲಿ 4,57,215 ರೂಪಾಯಿ) ದಂಡ ವಿಧಿಸಲಾಗಿದೆ.
2021ರಲ್ಲಿ ಇದೇ ಪತ್ರಕರ್ತ ಗಿಯುಲಿಯಾ ಮೆಲೋನಿ ಎತ್ತರವನ್ನು ಟೀಕಿಸಿ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದು ಮಾತ್ರವಲ್ಲ 1 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಿದ್ದರು. ಜಾರ್ಜಿಯಾ ಮೆಲೋನಿ ನನ್ನನ್ನು ಬೆದರಿಸಬೇಡ, ಅಷ್ಟಕ್ಕೂ ನೀನು ಕೇವಲ 4 ಫೀಟ್ ಎತ್ತರ. ನನಗೆ ನೀನು ಕಾಣುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಎತ್ತರವನ್ನು ಗೇಲಿ ಮಾಡಿದ ಕಾರಣಕ್ಕೆ ಕೋರ್ಟ್ 1,09,731 ರೂಪಾಯಿ ದಂಡ ವಿಧಿಸಲಾಗಿತ್ತು.