ಹೊಸದಿಗಂತ ವರದಿ, ಮಡಿಕೇರಿ:
ಕೇರಳದ ದಂಪತಿಯೊಂದು ಇಲ್ಲಿಗೆ ಸಮೀಪದ ಹೋಂಸ್ಟೇಯೊಂದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಕೇರಳ ರಾಜ್ಯದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ ದಂಪತಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಇಬ್ಬರೂ ನೇಣಿಗೆ ಶರಣಾಗಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಶುಕ್ರವಾ ಸಂಜೆ ಕೊಡಗಿಗೆ ಆಗಮಿಸಿದ್ದ ದಂಪತಿ ಇಲ್ಲಿಗೆ ಸಮೀಪದ ಕಗ್ಗೋಡ್ಲು ಗ್ರಾಮದ ಅರೆಕಾ ಹೋಂಸ್ಟೇಯಲ್ಲಿ ತಂಗಿದ್ದು, ಶನಿವಾರ ಬೆಳಗ್ಗೆ ಪತಿ-ಪತ್ನಿ ನೇಣಿಗೆ ಶರಣಾಗಿರುವುದು ಗೋಚರಿಸಿದೆ. ಈ ನಡುವೆ ಹಾಸಿಗೆಯಲ್ಲಿ ಮಲಗಿರುವ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಕೇರಳದಿಂದ ಕುಟುಂಬಸ್ಥರು ಬಂದ ನಂತರವೇ ಆತ್ಮಹತ್ಯೆಗೆ ಕಾರಣ ತಿಳಿದು ಬರಲಿದೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.