ಹೊಸದಿಗಂತ ವರದಿ ಹಾಸನ :
ಆಲೂರು ತಾಲ್ಲೂಕಿನ ಕಾಮತಿ ಗ್ರಾಮದ ಕಾಫಿ ತೋಟವೊಂದರಲ್ಲಿ ಮೆಣಸು ಕುಯ್ಯಲೆಂದು ಕೂಲಿ ಕೆಲಸಕ್ಕೆ ತೆರಳಿದ್ದ ಕೂಲಿ ಕಾರ್ಮಿಕನಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದ.
ತಾಲೂಕಿನ ವಾಟೆಹೊಳೆ ಸಮೀಪದ ಹರಿಹರಪುರ ಗ್ರಾಮದ ಲಕ್ಷ್ಮಣ್ (೫೦) ಮೃತ ದುರ್ದೈವಿ. ಸೋಮವಾರ ಬೆಳಗ್ಗೆ ಕೂಲಿ ಕೆಲಸಕ್ಕೆ ಎಂದು ತಾಲೂಕಿನ ಕಾಂತಿ ಸಮೀಪದ ಗುಣಸೇ ಗ್ರಾಮದ ಶಿವಣ್ಣ ಎಂಬವರ ಕಾಫಿ ತೋಟದ ಕೆಲಸಕ್ಕೆ ತೆರಳಿದರು ಮರ ಹತ್ತಿ ಮೆಣಸು ಕೊಯ್ಯುವಾಗ ಪಕ್ಕದಲ್ಲಿ ಹಾದು ಹೊಗಿದ್ದ ವಿದ್ಯುತ್ ತಂತಿಗೆ ತಾಗಿ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಭೆಟಿ ನೀಡಿ ಸ್ಥಳ ಪರಿಶೀಳನೆ ನಡೆಸಿದ್ದಾರೆ.