ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆತ್ತ ತಾಯಿಗೆ ಸಮ ಯಾರೂ ಇಲ್ಲ ಎಂಬುದು ಈ ವಿಡಿಯೋದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಬದುಕಿನ ಬಂಡಿ ಸಾಗಿಸಲು ಒಬ್ಬ ತಾಯಿ ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಕಸ ಗುಡಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಒಡಿಶಾದ ಬರಿಪದ ಪುರಸಭೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಲಕ್ಷ್ಮಿ ಮುಖಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾತಾಡಿದ ಆ ತಾಯಿ ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆಯಿದೆ. ಮನೆಯಲ್ಲಿ ಮಗು ನೋಡಿಕೊಳ್ಳುವವರು ಯಾರೂ ಇಲ್ಲ ಹಾಗಾಗಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ದುಡಿಯುತ್ತಿದ್ದೇನೆ. ಇದು ನನಗೆ ಸಮಸ್ಯೆ ಅಲ್ಲ, ಇದು ನನ್ನ ಕರ್ತವ್ಯ ಎಂದು ಮಹಿಳಾ ಸ್ವೀಪರ್ ಲಕ್ಷ್ಮಿ ಮುಖಿ ಸಂತೋಷದಿಂದ ಹೇಳಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಇದು ತಾಯಿಯ ತ್ಯಾಗ, ಧೈರ್ಯ, ಇತರರಿಗೆ ಮಾದರಿಯ ಸಂಕೇತ ಎಂದು ಕಮೆಂಟ್ ಮಾಡುತ್ತಿದ್ದಾರೆ.
#WATCH | Odisha: A lady sweeper, Laxmi cleans the road in Mayurbhanj district with her baby tied to her back. pic.twitter.com/g7rs3YMlFn
— ANI (@ANI) May 29, 2022