ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ. ಸಿ. ಮೋಹನ್ ಅಚ್ಚರಿ ರೀತಿಯಲ್ಲಿ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಆರಂಭದಲ್ಲಿ ಮುನ್ನಡೆಯಲ್ಲಿದ್ದ ಪಿ. ಸಿ. ಮೋಹನ್ ನಂತರದ ಹಲವು ಸುತ್ತಿನಲ್ಲಿ ಹಿನ್ನೆಡೆ ಅನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಲೀಡ್ ಕಾಯ್ದುಕೊಂಡಿದ್ದರು. ಅವರೇ ಗೆಲ್ಲುತ್ತಾರೆ ಎಂದು ಜನ ಊಹಿಸಿದ್ದರು. ಆದರೆ ಮಹದೇವಪುರ, ಸಿ.ವಿ.ರಾಮನ್ ನಗರದಲ್ಲಿ ಪಿ.ಸಿ.ಮೋಹನ್ ಗೆ ಹೆಚ್ಚಿನ ಮತಗಳು ಸಿಕ್ಕಿದ್ದು 35 ರಿಂದ 40 ಸಾವಿರ ಲೀಡ್ ನಿಂದ ಗೆಲುವು ಸಾಧಿಸಿದ್ದಾರೆ.