ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಆಲ್-ಟೈಮ್ ಫೇವರೆಟ್ ಕಾಮಿಡಿ ಮೂವಿ ‘ಗೋಲ್ಮಾಲ್’ ಸರಣಿಯ ಐದನೇ ಭಾಗಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಭಾರತೀಯ ಸಿನಿಮಾರಂಗದ ಮಾಸ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ‘ಗೋಲ್ಮಾಲ್ 5’ ಸಿನಿಮಾ ಮುಂದಿನ ವರುಷ ಅಂದರೆ ಜನವರಿ 8, 2027ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.
ಈ ಖುಷಿಯ ಸುದ್ದಿಯನ್ನು ಸ್ವತಃ ನಿರ್ದೇಶಕ ರೋಹಿತ್ ಶೆಟ್ಟಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಗು, ತಮಾಷೆ, ಖುಷಿ, ಸಂತೋಷ ಮತ್ತು ಕುಟುಂಬ… ಅಷ್ಟೇ, ಬೇರೇನೂ ಇಲ್ಲ” ಎಂದು ಬರೆದುಕೊಂಡು ಅಭಿಮಾನಿಗಳ ಕಾತುರವನ್ನು ಹೆಚ್ಚಿಸಿದ್ದಾರೆ.
ಈ ಬಾರಿಯ ‘ಗೋಲ್ಮಾಲ್ 5’ರ ದೊಡ್ಡ ಹೈಲೈಟ್ ಅಂದರೆ ಬಾಲಿವುಡ್ನ ಖಿಲಾಡಿ ಅಕ್ಷಯ್ ಕುಮಾರ್ ಈ ಗ್ಯಾಂಗ್ಗೆ ಹೊಸದಾಗಿ ಎಂಟ್ರಿ ಕೊಟ್ಟಿರೋದು. ವಿಜಯ್ ಮತ್ತು ಗೋಪಾಲ್ ಪಾತ್ರದಲ್ಲಿ ರಿಪೀಟ್ ಆಗಲಿರೋ ಅಜಯ್ ದೇವಗನ್ ಅವರ ಜೊತೆ ಅಕ್ಷಯ್ ಕುಮಾರ್ ಜೋಡಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
2006ರಲ್ಲಿ ಬಂದ ಮೊದಲ ‘ಗೋಲ್ಮಾಲ್: ಫನ್ ಅನ್ಲಿಮಿಟೆಡ್’ ಸಿನಿಮಾದಲ್ಲಿ ಲಕ್ಷ್ಮಣ್ ಪಾತ್ರ ಮಾಡಿ ಮಿಂಚಿದ್ದ ಶರ್ಮನ್ ಜೋಶಿ, ಬರೋಬ್ಬರಿ 21 ವರ್ಷಗಳ ನಂತರ ಮತ್ತೆ ಈ ಫ್ರಾಂಚೈಸಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಈ ಸಿನಿಮಾದಲ್ಲಿ ಮುಖ್ಯ ಹಾಗೂ ಕೊಂಚ ನೆಗೆಟಿವ್ ಶೇಡ್ ಇರೋ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.
2006ರಲ್ಲಿ ಆರಂಭವಾದ ‘ಗೋಲ್ಮಾಲ್’ ಪ್ರಯಾಣ, 2008ರ ‘ಗೋಲ್ಮಾಲ್ ರಿಟರ್ನ್ಸ್’, 2010ರ ‘ಗೋಲ್ಮಾಲ್ 3’ ಮತ್ತು 2017ರ ‘ಗೋಲ್ಮಾಲ್ ಅಗೇನ್’ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. 2022ರಲ್ಲಿ ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಎಂಬ ಸ್ಪಿನ್-ಆಫ್ ಸಿನಿಮಾ ಕೂಡ ಬಂದಿತ್ತು. ಇದೀಗ 2027ರ ಹೊಸ ವರ್ಷದ ಆರಂಭದಲ್ಲೇ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿ ‘ಗೋಲ್ಮಾಲ್ 5’ ಥಿಯೇಟರ್ಗೆ ಬರ್ತಿರೋದ್ರಿಂದ, ಗಲ್ಲಾಪೆಟ್ಟಿಗೆಯಲ್ಲಿ ನಗುವಿನ ಮಳೆ ಸುರಿಯುವುದು ಪಕ್ಕಾ ಎನ್ನಲಾಗುತ್ತಿದೆ.



