ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬೆನ್ನಲ್ಲಿಯೇ ಕೆನಡಾ (Canada) ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಈ ಬೆನ್ನಲ್ಲೇ ಇದೀಗ ಭಾರತವು ಕೆನಾಡಾಗೆ ಗಡುವು ನೀಡುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ.
ಭಾರತದಲ್ಲಿರುವ 41 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಾಸ್ ಕರೆಸಿಕೊಳ್ಳುವಂತೆ ಕೆನಡಾ ರಾಯಭಾರ ಕಚೇರಿ ಹಾಗೂ ಕೆನಡಾ ಸರ್ಕಾರಕ್ಕೆ ಭಾರತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಕ್ಟೋಬರ್ 10ರ ಒಳಗಾಗಿ ಇವರೆಲ್ಲರೂ ಭಾರತವನ್ನು ತೊರೆಯಬೇಕು ಎಂದು ಸೂಚನೆ ನೀಡಿದೆ.
ಹಾಗೇನಾದರೂ ಅಕ್ಟೋಬರ್ 10ರ ನಂತರವೂ ಈ 41 ರಾಜತಾಂತ್ರಿಕರ ಪೈಕಿ ಯಾರಾದರೂ ಉಳಿದುಕೊಂಡಲ್ಲಿ ಅವರಿಗೆ ರಾಜತಾಂತ್ರಿಕ ವಿನಾಯಿತಿ ಹಾಗೂ ಇತರ ಪ್ರಯೋಜನಗಳನ್ನು ಭಾರತ ಸರ್ಕಾರ ನಿಲ್ಲಿಸಲಿದೆ ಎಂದು ಸೂಚನೆ ನೀಡಿದೆ.
ಪ್ರಸ್ತುತ ಭಾರತದಲ್ಲಿ ಕೆನಡಾ 62 ರಾಜತಾಂತ್ರಿಕ ಅಧಿಕಾರಿಗಳು ಕೆಲಸ ಮಾಡುತ್ತಿದ್ದ, ಅಕ್ಟೋಬರ್ 10ರ ಬಳಿಕ ಕೆನಡಾದ 21 ಅಧಿಕಾರಿಗಳು ಮಾತ್ರವೇ ದೇಶದಲ್ಲಿ ಇರಲಿದ್ದಾರೆ.