ರಾಮಲಲಾ ದರುಶನಕ್ಕೆ ಹರಿದುಬರುತ್ತಿದೆ ‘ಭಕ್ತಸಾಗರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯ ನಿನ್ನೆಯೇ ಸಂಪನ್ನವಾಗಿದ್ದು, ಇಂದು ಭಕ್ತರಿಗೆ ರಾಮಲಲಾ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಬೆಳಗಿನ ಜಾವ ಮೂರು ಗಂಟೆಯಿಂದಲೇ ಭಕ್ತರು ರಾಮಲಲಾ ದರುಶನಕ್ಕೆ ಕಾದು ಕುಳಿತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದೆ.

ಕೊರೆಯುವ ಚಳಿಯನ್ನೂ ಲೆಕ್ಕಿಸದ ಭಕ್ತರು ದೇವರ ದರುಶನಕ್ಕಾಗಿ ಕಾದು ನಿಂತಿದ್ದಾರೆ. ದೇಗುಲದ ದ್ವಾರದಲ್ಲಿಯೇ ಭಕ್ತರು ನಿಂತಿದ್ದು, ಜೈಶ್ರೀರಾಮ್, ಜೈ ಸಿಯಾರಾಮ್ ಎನ್ನುವ ಘೋಷಣೆಗಳನ್ನು ಕೂಗಿ ರಾಮಭಕ್ತಿ ಮೆರೆಯುತ್ತಿದ್ದಾರೆ.

ಮೊದಲು ನಾವು ನಮ್ಮ ರಾಮನನ್ನು ನೋಡಬೇಕು ಎಂದು ಭಕ್ತರು ಬೇರೆ ಬೇರೆ ಸ್ಥಳಗಳಿಂದ ಅಯೋಧ್ಯೆಗೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಮಂದಿರ ಲೋಕಾರ್ಪಣೆಯಾಗಿದ್ದು, ಇಂದು ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸುವ ಬಗ್ಗೆ ಗೊತ್ತಿದ್ದರೂ ಜನ ಆಗಮಿಸಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ದೇಗುಲದ ಬಾಗಿಲು ತೆರೆದಿದೆ, ಆದರೆ ಭಕ್ತರು 11:30ರ ನಂತರ ರಾಮನ ದರುಶನ ಪಡೆಯಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!