ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸಲು 80,000 ನಾಣ್ಯಗಳೊಂದಿಗೆ ಕೋರ್ಟ್’ಗೆ ಹಾಜರಾದ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೇಶದಲ್ಲಿ ಡಿವೋರ್ಸ್ ಪ್ರಕರಣ ಸಾಮಾನ್ಯದಂತೆ ಆಗಿ ಬಿಟ್ಟಿದೆ. ಆದ್ರೆ ಕೆಲವೊಮ್ಮೆ ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರ ವಿಚ್ಛೇದನ ಪ್ರಕರಣಗಳೂ ಸದ್ದು ಮಾಡುತ್ತವೆ.

ಅದೇ ರೀತಿ ಇದೀಗ ಆಸಕ್ತಿದಾಯಕ ಡಿವೋರ್ಸ್‌ ಪ್ರಕರಣವೊಂದು ವೈರಲ್‌ ಆಗಿದೆ . ತಮಿಳುನಾಡಿನ ವ್ಯಕ್ತಿಯೊಬ್ಬರು ವಿಚ್ಛೇದನ ಪ್ರಕರಣ ದಾಖಲಿಸಿರುವ ಪತ್ನಿಗೆ ಜೀವನಾಂಶ ಭತ್ಯೆ ನೀಡಿದ ಮುಂದಾಗಿರುವ ರೀತಿಯೇ ನೆಟ್ಟಿಗರ ಗಮನ ಸೆಳೆದಿದೆ.

ಕೊಯಂಬತ್ತೂರಿನಲ್ಲಿ ವಿಚ್ಛೇದಿನ ಪತ್ನಿಗೆ 80 ಸಾವಿರ ರೂ. ಜೀವನಾಂಶ ನೀಡಲು ಆತ ಅಷ್ಟೂ ಮೊತ್ತವನ್ನು 1 ಮತ್ತು 2 ರೂ. ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. 20 ಚೀಲಗಳಲ್ಲಿ ಈ ನಾಣ್ಯಗಳನ್ನು ತಂದು ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ. ಸದ್ಯ ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

https://x.com/ians_india/status/1869628993755906103?ref_src=twsrc%5Etfw%7Ctwcamp%5Etweetembed%7Ctwterm%5E1869628993755906103%7Ctwgr%5E2e0c9746bc278f390fd03c21bf3ba3696d5234fa%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fman-appears-in-court-with-rs-80000-coins-to-pay-maintenance-to-wife-video-goes-viral%2F

ಕೊಯಂಬತ್ತೂರಿನ ಕುಟುಂಬ ನ್ಯಾಯಾಲಯ ಈ ವಿಶಿಷ್ಟ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ವ್ಯಕ್ತಿ ವೃತ್ತಿಯಲ್ಲಿ ಚಾಲಕ. ಜತೆಗೆ ತನ್ನದೆ ಆದ ಕಾಲ್‌ ಟ್ಯಾಕ್ಸಿ ಹೊಂದಿದ್ದಾರೆ. ಅವರ ಪತ್ನಿ ಕಳೆದ ವರ್ಷ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಪತ್ನಿಗೆ 2 ಲಕ್ಷ ರೂ. ಜೀವನಾಂಶ ಪಾವತಿಸುವಂತೆ ಆದೇಶ ಹೊರಡಿಸಿತ್ತು.

37 ವರ್ಷದ ಈ ವ್ಯಕ್ತಿ ಸದ್ಯ ತಮ್ಮ ಸಹೋದರಿಯೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದಾರೆ.

ಈ ವ್ಯಕ್ತಿ ಕಾರಿನಿಂದ ಕಾಯಿನ್‌ ತುಂಬಿದ ಚೀಲವನ್ನು ಹಿಡಿದು ಕೋರ್ಟ್‌ ಬಂದಿದ್ದಾರೆ. ಒಟ್ಟು 20 ಚೀಲಗಳಲ್ಲಿ ಅವರು 1 ಮತ್ತು 2 ರೂ.ಯ ಕಾಯಿನ್‌ ತಂದಿದ್ದರು . ಇದರಲ್ಲಿ ಒಟ್ಟು 80,000 ರೂ. ಇರುವುದಾಗಿ ಅವರು ಕೋರ್ಟ್‌ಗೆ ತಿಳಿಸಿದ್ದರು. ಅದಾಗ್ಯೂ ಕೋರ್ಟ್‌ ಈ ನಾಣ್ಯದ ಬದಲು ಹಣವನ್ನು ಖಾತೆಗೆ ಜಮಾಯಿಸುವಂತೆ ಸೂಚಿಸಿತು.

ಜಡ್ಜ್‌ ಹೇಳಿದ್ದೇನು?
ಈ ವ್ಯಕ್ತಿ ಇಷ್ಟು ದೊಡ್ಡ ಮೊತ್ತವನ್ನು ಕಾಯಿನ್‌ ರೂಪದಲ್ಲಿ ತಂದಿರುವುದನ್ನು ನೋಡಿ ಜಡ್ಜ್‌ ಒಂದು ಕ್ಷಣ ಬೆಕ್ಕಸ ಬೆರಗಾಗಿದ್ದರು. ಇದನ್ನು ವಾಪಾಸ್‌ ತೆಗೆದುಕೊಂಡು ಹೋಗಿ ನೋಟ್‌ ರೂಪದಲ್ಲಿ ಪಾವತಿಸಲು ಸೂಚಿಸಿದರು. ವಡವಲ್ಲಿ ಮೂಲದ ಈ ಚಾಲಕ ಬಳಿಕ ಕಾಯಿನ್‌ ಬದಲು ನೋಟ್‌ ಮೂಲಕ ಹಣ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾಕಿ ಉಳಿದಿರುವ 1.2 ಲಕ್ಷ ರೂ.ಯನ್ನು ಶೀಘ್ರದಲ್ಲೇ ಒದಗಿಸುವಂತೆ ಕೋರ್ಟ್‌ ಸೂಚಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!