ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲೆಂಜ್‌ಗಳಲ್ಲಿ ಗೆಲ್ಲೋದು ಖುಷಿ ಹೌದು, ಆದರೆ ಗೆಲುವು ನಿಮ್ಮ ಜೀವಕ್ಕಿಂತ ಮುಖ್ಯವಾ? ಜಮೈಕಾದಲ್ಲಿ ವ್ಯಕ್ತಿಯೊಬ್ಬ 21 ಕಾಕ್‌ಟೇಲ್‌ಗಳನ್ನು ಕುಡಿದು ಮೃತಪಟ್ಟಿದ್ದಾರೆ.
ಟಿಮೋಥಿ ಸದರ್ನ್ ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ನಿವಾಸಿಯಾಗಿದ್ದು, ಬಾರ್‌ಗೆ ತೆರಳಿದ ವೇಳೆ ಡ್ರಿಂಕಿಂಗ್ ಚಾಲೆಂಜ್ ಸ್ವೀಕರಿಸಿದ್ದಾರೆ. ಚಾಲೆಂಜ್ ಏನೆಂದರೆ ಮೆನ್ಯುವಿನಲ್ಲಿ ಇರುವ ಎಲ್ಲ ಕಾಕ್‌ಟೇಲ್‌ಗಳನ್ನು ಟ್ರೈ ಮಾಡಿ ಅದು ಯಾವ ಫ್ಲೇವರ್ ಎಂದು ಗೆಸ್ ಮಾಡಬೇಕು. ಈ ಚಾಲೆಂಜ್ ಸ್ವೀಕರಿಸಿದ್ದು, ಕಾಕ್‌ಟೇಲ್‌ಗಳನ್ನು ಕುಡಿದು ರೂಮ್‌ಗೆ ತೆರಳಿದ್ದಾರೆ. ಅತಿಯಾದ ಮದ್ಯದಿಂದಾಗಿ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ನಿಂದ ಮೃತಪಟ್ಟಿದ್ದಾರೆ.