ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದ ಇಸ್ರೇಲ್ ಹಾಗೂ ಇರಾನ್ ಯುದ್ಧದ ಎಫೆಕ್ಟ್ ಭಾರತದಲ್ಲೂ ಸಮಸ್ಯೆ ತಂದಿಟ್ಟಿದೆ. ಗ್ಯಾಸ್ ಸಿಗೋದಿಲ್ಲ ಎಂದು ಎಲೆಕ್ಟ್ರಿಕ್ ಸ್ಟೋವ್‌ಗಳ ಖರೀದಿಗೆ ಮುಗಿಬಿದ್ದಿರುವ ಜನ ಪೆಟ್ರೋಲ್-ಡಿಸೇಲ್ ಕೂಡ ಸಿಗೋದೇ ಇಲ್ಲ ಎಂದು ಲೀಟರ್‌ಗಟ್ಟಲೆ ಸಂಗ್ರಹಣೆಗೆ ಮುಂದಾಗಿದ್ದಾರೆ.
ತಮಿಳುನಾಡಿನ ಪೆಟ್ರೋಲ್ ಬಂಕ್ ಒಂದರಲ್ಲಿ ವ್ಯಕ್ತಿಯೊಬ್ಬರು ನೀರಿನ ಕ್ಯಾನ್‌ನಲ್ಲಿ ಬಂದು ಪೆಟ್ರೋಲ್ ತುಂಬಿಸಿಕೊಂಡು ಹೋಗಿದ್ದಾರೆ. ಈಗ ಸಿಲಿಂಡರ್‌ಗೆ ಸಮಸ್ಯೆಯಾಗಿದೆ ಮುಂದೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿಯನ್ನು ಯಾರೋ ಹಬ್ಬಿಸಿದ್ದಾರೆ. ಸುದ್ದಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್ ಬಂಕ್ ಮುಂದೆ ಜನ ಪೆಟ್ರೋಲ್ ಹಾಕಿಸಲು ಮುಗಿ ಬಿದ್ದಿದ್ದಾರೆ.
ಗಾಡಿ ಫುಲ್ ಟ್ಯಾಂಕ್ ಮಾಡಿಸಿಕೊಂಡ ನಂತರ ನೀರು ತುಂಬುವ ಕ್ಯಾನ್ ತುಂಬಾ ಪೆಟ್ರೋಲ್ ತುಂಬಿಸಿಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸರ್ಕಾರ ನಮಗೆ ಸಮಸ್ಯೆ ಇಲ್ಲ. ನಮ್ಮ ಬಳಿ ಸ್ಟಾಕ್ ಇದೆ ಎಂದು ಹೇಳಿದರೂ ನಂಬದ ಜನ ತಮ್ಮದೇ ಬುದ್ಧಿ ಉಪಯೋಗಿಸಿ ಸ್ಟಾಕ್ ಮಾಡಿ ಇಡುತ್ತಿದ್ದಾರೆ.



