May 15, 2026
Friday, May 15, 2026
spot_img

ರಾಜಕೀಯ ಲಾಭ ಪಡೆಯಲು ಈ ಆತುರವೇ?: ಪ್ರಧಾನಿ ಮೋದಿ ಪತ್ರಕ್ಕೆ ಖರ್ಗೆ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಸರ್ವಪಕ್ಷಗಳು ಬೆಂಬಲಿಸುವಂತೆ ಪ್ರಧಾನಿ ಮೋದಿ ಬರೆದಿರುವ ಪತ್ರಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ರಾಜಕೀಯ ಲಾಭ ಪಡೆಯಲು ಆತುರ ಎಂದು ಟೀಕಿಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾಗಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಏಪ್ರಿಲ್ 16ರಿಂದ 18ರವರೆಗೆ ವಿಶೇಷ ಸಂಸತ್ ಅಧಿವೇಶನವನ್ನು ಕರೆದಿದೆ. ಈ ಸಂದರ್ಭ ಈ ಕಾಯ್ದೆಯನ್ನು ಬೆಂಬಲಿಸಲು ಸದಸ್ಯರು ಒಗ್ಗೂಡುವಂತೆ ಮೋದಿ ಒತ್ತಾಯಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. 2023 ರಲ್ಲಿ ಈ ಶಾಸನವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಅಂದೇ ಅನುಷ್ಠಾನಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ ಕಳೆದ 30 ತಿಂಗಳಲ್ಲಿ ಏನೂ ಮಾಡಲಿಲ್ಲ. ಇದೀಗ ದಿಢೀರ್ ವಿಶೇಷ ಅಧಿವೇಶನವನ್ನು ಕರೆದು ಯಾವುದೇ ರೀತಿಯ ಚರ್ಚೆ ನಡೆಸದೆ ನಮ್ಮ ಸಹಕಾರವನ್ನು ಕೇಳುತ್ತಿದ್ದೀರಿ ಎಂದು ಹೇಳಿದರು.

ಅದರಲ್ಲೂ ರಾಜ್ಯ ಚುನಾವಣೆಗಳು ನಡೆಯುತ್ತಿರುವ ಸಂದರ್ಭ ಈ ನಿರ್ಧಾರ ಮಹಿಳೆಯರನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ಉದ್ದೇಶದಿಂದಲ್ಲೇ ಅಥವಾ ರಾಜಕೀಯ ಲಾಭ ಪಡೆಯಲು ಎಂಬ ನಮ್ಮ ನಂಬಿಕೆಯನ್ನು ಬಲಪಡಿಸಿದೆ. ಹಾಗಾಗಿ ನೀವು ಮೊದಲು ವಿಧಾನಸಭೆ ಚುನಾವಣೆಗಳು ಮುಗಿದ ಬಳಿಕ ಸರ್ವಪಕ್ಷ ಸಭೆ ಕರೆದು ಮಾತುಕತೆ ನಡೆಸಿ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !