ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ವರ್ತೂರಿನ ಮಣಿಪಾಲ್ ಹಾಸ್ಪಿಟಲ್‌ನಲ್ಲಿ ವೈದ್ಯರೊಬ್ಬರ ಸಮಯಪ್ರಜ್ಞೆಯಿಂದ ಜೀವವೊಂದು ಉಳಿದಿದೆ. ಹೌದು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದುಬಿದ್ದಿದ್ದು, ಡಾಕ್ಟರ್ ತಕ್ಷಣವೇ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.
ಗ್ಯಾಸ್ಟ್ರಿಕ್‌ನಿಂದ ವ್ಯಕ್ತಿಗೆ ಎದೆನೋವು ಕಾಣಿಸಿತ್ತು. ವೈದ್ಯರನ್ನು ಕಾಣಲು ತಮ್ಮ ಸರದಿಗಾಗಿ ರಿಸೆಪ್ಷನ್‌ನಲ್ಲಿ 67 ವರ್ಷದ ವ್ಯಕ್ತಿ ಕಾದು ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆಯೇ ಅವರು ಕುಸಿದು ನೆಲಕ್ಕೆ ಬಿದ್ದಿದ್ದಾರೆ.
ತಕ್ಷಣ ಡಾಕ್ಟರ್ ರಾಕಿ ಕಥೇರಿಯಾ ಸ್ಥಳಕ್ಕೆ ಆಗಮಿಸಿ ಸಿಪಿಆರ್ ಮಾಡಿ ಆತನಿಗೆ ಮರುಜೀವ ನೀಡಿದ್ದಾರೆ. ಪರೀಕ್ಷೆಗಳ ನಂತರ ವ್ಯಕ್ತಿಗೆ ಲಘು ಹೃದಯಾಘಾತ ಆಗಿತ್ತು ಎಂದು ತಿಳಿದುಬಂದಿದೆ.
ಗಂಟೆಯ ಚಿಕಿತ್ಸೆ ನಂತರ ವ್ಯಕ್ತಿಗೆ ಪ್ರಜ್ಞೆ ಬಂದಿದೆ. ಇನ್ನು ವೈದ್ಯರ ಸಮಯಪ್ರಜ್ಞೆಗೆ ವ್ಯಕ್ತಿಯ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಬಂದರೂ ಕಡೆಗಣಿಸದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಕುಸಿದುಬಿದ್ದವರನ್ನು ತಕ್ಷಣವೇ ಅಟೆಂಡ್ ಮಾಡಿ ಜೀವ ಉಳಿಸಿ ಕೊಟ್ಟ ಡಾಕ್ಟರ್‌ನ್ನು ಮರೆಯೋದಿಲ್ಲ ಎಂದು ಕುಟುಂಬದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.