ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು 50 ವರ್ಷ ಕಳೆದರೂ ಮರೆತಿರಲಿಲ್ಲ. ಶಾಲೆಯ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ .
ಬಾಲಕೃಷ್ಣನ್ ಅವರ ಮಾಜಿ ಸಹಪಾಠಿ ವಿಜೆ ಬಾಬು ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 2ರಂದು ಹಲ್ಲೆ ನಡೆದಿದೆ.ಬಾಲಕೃಷ್ಣನ್ 4 ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆಗೆ ಪ್ರತೀಕಾರವಾಗಿ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ನಾಲ್ಕನೇ ತರಗತಿಯ ಘಟನೆಯ ಬಗ್ಗೆ ಬಾಬು ಮತ್ತು ಬಾಲಕೃಷ್ಣನ್ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ಆ ಸಮಯದಲ್ಲಿ ವಿಷಯ ಇತ್ಯರ್ಥವಾಗಿದ್ದರೂ, ಬಾಲಕೃಷ್ಣನ್, ಮ್ಯಾಥ್ಯೂ ಜೊತೆಗೆ ಜೂನ್ 2 ರಂದು ಮತ್ತೆ ಗಲಾಟೆ ನಡೆದಿದೆ.