ಹೊಸದಿಗಂತ ವರದಿ, ಕುಶಾಲನಗರ:
ಮಾರಕಾಯುಧದಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯ ವಾರ್ಡ್ ನಂ 2 ರಲ್ಲಿ ನಡೆದಿದೆ.
ಬಸವೇಶ್ವರ ಬಡಾವಣೆಯ ಜೋಸೆಫ್ (55) ಸ್ಥಳದಲ್ಲೇ ಮೃತಪಟ್ಟವರಾಗಿದ್ದಾರೆ.
ಗಿರೀಶ್ ಎಂಬಾತ ಜೋಸೆಫ್ ಹಾಗೂ ವಸಂತ ಎಂಬವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದು ಘಟನೆಯಲ್ಲಿ ಜೋಸೆಫ್ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಸುಂದರನಗರದ ವಸಂತ ಪುಟ್ಟ ಎಂಬವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿ ಗಿರೀಶ್’ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.