ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ರೈಲಿಗೆ ಕೂಲಿ ಕಾರ್ಮಿಕನೊಬ್ಬ ಕಾಲು ಕೊಟ್ಟಿದ್ದಾನೆ.
ಸವಳಂಗ ರಸ್ತೆಯಲ್ಲಿ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಬಿಹಾರದ ಮೂಲಕ ಕಾರ್ಮಿಕ ಆದಿಲ್ ಕೆಲಸಕ್ಕೆಂದು ಬಂದಿದ್ದ. ಕುಡಿದ ಮತ್ತಿನಲ್ಲಿ, ಜರ್ದಾ ತಂಬಾಕು ಅಗಿಯುತ್ತಾ ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದನು.
ನಂತರ ದೂರದಲ್ಲಿ ರೈಲು ಕಾಣಿಸಿದೆ ಆದರೂ ಆತ ರೈಲ್ವೆ ಹಳಿಯ ಮೇಲೆಯೇ ಕುಳಿತಿದ್ದ. ಕಾಲಿನ ಮೇಲೆ ರೈಲು ಚಲಿಸಿದ್ದು, ಆತನ ಕಾಲು ತುಂಡಾಗಿದೆ. ಕಾಲು ತುಂಡಾದರೂ ಆತ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಸುಮ್ಮನೆ ಕುಳಿತಿದ್ದಾನೆ.
ಆತ ಕೂಗಾಡಿಲ್ಲವಾದ್ದರಿಂದ ಆತನ ರಕ್ಷಣೆಗೆ ಯಾರೂ ಬಂದಿಲ್ಲ. ನಂತರ ಹತ್ತಿರ ಬಂದು ನೋಡಿದಾಗ ಆತನ ಕಾಲು ತುಂಡಾಗಿರುವುದು ಕಂಡಿದೆ. ತಕ್ಷಣ ಆಂಬುಲೆನ್ಸ್ ಕರೆಸಿ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.