ಹೊಸದಿಗಂತ ಡಿಜಿಟಲ್ ಡೆಸ್ಕ್
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಿಂದ ಸುಮಾರು 62 ವರ್ಷಗಳ ಹಿಂದೆ ಅಂದರೆ 13 ವರ್ಷ ಪ್ರಾಯದಲ್ಲಿ ಕೆಲಸವನ್ನು ಅರಿಸಿಕೊಂಡು ವಾಣಿಜ್ಯ ನಗರ ಮುಂಬೈಗೆ ತೆರಳಿದ್ದ ವ್ಯಕ್ತಿಯೋರ್ವರು ಮರಳಿ ಊರಿಗೆ ಅಗಮಿಸಿ ಅಚ್ಚರಿ ಮೂಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ರಾಯಶ ನಿವಾಸಿ ದಿ. ಗುಡ್ಡಪ್ಪ ಪೂಜಾರಿ ಹಾಗೂ ನಾಗಮ್ಮ ಅವರ ಮೂರನೇ ಪುತ್ರ ಸಂಜೀವ ಪೂಜಾರಿ ಅವರು ತನ್ನ 13 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಕೆಲಸ ಅರಿಸಿಕೊಂಡು ಮುಂಬೈಯಂತ ಮಹಾನಗರಕ್ಕೆ ತೆರಳಿದ್ದರು. ಅಂದು ಮುಂಬೈಗೆ ಹೋದ ಸಂಜೀವ ಪೂಜಾರಿ ಈವರೆಗೆ ಮನೆ ಮಂದಿಯವರ ಮುಖವನ್ನು ಒಮ್ಮೆಯೂ ತಿರುಗಿ ನೋಡಿದವರಲ್ಲ. ತಂದೆ, ತಾಯಿಯ ಸುಖ-ದುಖದಲ್ಲಾಗಲಿ, ಸ್ವಂತ ಮನೆಯಲ್ಲಾದಂತ ಯಾವುದೇ ಅಗು-ಹೋಗುಗಳಲ್ಲಿ ಭಾಗವಹಿಸಲೇ ಇಲ್ಲ. ಮುಂಬೈಯಲ್ಲಿ ಬಸ್ಸಿಳಿದ ಬಳಿಕ ನರಿಕೊಂಬುವಿನಲ್ಲಿರುವ ತಮ್ಮ ಕುಟುಂಬಸ್ಥರು ಮಾತ್ರವಲ್ಲ ಮನೆಯ ಸಂಪರ್ಕವನ್ನೇ ಕಡಿದುಕೊ0ಡಿದ್ದರು.
ಸಂಜೀವ ಪೂಜಾರಿಯವರನ್ನು ಸ್ಥಳೀಯ ನಿವಾಸಿ ತನಿಯಪ್ಪ ಎಂಬವರು ಉದ್ಯೋಗ ನಕೊಡಿಸುವ ಭರವಸೆಯೊಂದಿಗೆ ಮುಂಬಯಿಗೆ ಕರೆದುಕೊಂಡು ಹೋಗಿದ್ದರಂತೆ, ಇವರ ತಂದೆ ತಾಯಿ ಮಗನ ವಾಪಾಸಾಗಬಹುದೆಂಬ ನಿರೀಕ್ಷೆಯಿಂದ ಗಾಗಿ ಕಾದು, ಕಾದು ಕೊನೆಯುಸಿರೆಳೆದಿದ್ದಾರೆ. ಮಗ ಬದುಕಿ ಬರುವ ಆಸೆಯನ್ನು ಹೆತ್ತವರು, ಮನೆಮಂದಿ ಕಳೆದುಕೊಂಡಿದ್ದರು. ಇದೀಗ ಅವರು ಮುಂಬೈಯಿಂದ ದಿಢೀರನೇ ತನ್ನ ಸಹೋದರ ಗಂಗಾಧರ ಪೂಜಾರಿ ಅವರ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ!