ಮಹಾ ದುರಂತದಲ್ಲಿ ಸಾವನ್ನೇ ಗೆದ್ದು ಬಂದ ವ್ಯಕ್ತಿ.. ಇಷ್ಟಕ್ಕೂ ಆ 30 ಸೆಕಂಡ್ ನಲ್ಲಿ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ವಿಮಾನ ಪತನವಾದ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಪವಾಡಸದೃಶವಾಗಿ ಓರ್ವ ವ್ಯಕ್ತಿ ವಿಮಾನದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಹೌದು, ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 241 ಪ್ರಯಾಣಿಕರು ಕೂಡ ಸಾವನ್ನಪ್ಪಿದ್ದಾರೆ. ಪಾರಾದ ವಿಶ್ವಾಸ್‌ ಅವರು ತುರ್ತು ನಿರ್ಗಮನ ಡೋರ್‌ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದರಿಂದ ಕೊನೆ ಕ್ಷಣದಲ್ಲಿ ವಿಮಾನದಿಂದ ಹಾರಿ ಪಾರಾಗಿದ್ದಾರೆ.

ವಿಮಾನ ನಿಲ್ದಾಣದ ಟೇಕಾಫ್‌ ಆದ 30 ಸೆಕೆಂಡ್‌ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ನಂತರ ವಿಮಾನ ಪತನಗೊಂಡಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸ್‌ ತನ್ನ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಇಂದು ಸಹೋದರನ ಜೊತೆ ಯುಕೆಗೆ ತೆರಳುತ್ತಿದ್ದರು. ವಿಶ್ವಾಸ್‌ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!