ಹೊಸದಿಗಂತ ಡಿಜಿಟಲ್ ಡೆಸ್ಕ್:
12 ವರ್ಷದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2005ರಲ್ಲಿ ಕೃತ್ಯ ನಡೆದಾಗ ಈತ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ವಯಸ್ಕನಾಗಿದ್ದ ಎಂಬ ಆಧಾರದಲ್ಲಿ ಬಿಡುಗಡೆಗೆ ಆದೇಶಿಸಿದೆ.
ಕೊಲೆ ಪ್ರಕರಣವೊಂದರಲ್ಲಿ 34 ವರ್ಷದ ಮಕ್ಕಲ್ಲ ನಾಗಯ್ಯ ಎಂಬುವರು 12 ವರ್ಷಗಳ ಕಾಲ ಜೈಲಿನಲ್ಲಿದ್ದರು. 2005 ರಲ್ಲಿ ಅವರ ವಿರುದ್ಧ ಪ್ರಾರಂಭವಾದ ಕಾನೂನು ಪ್ರಕ್ರಿಯೆಯು ವಿಚಾರಣಾ ನ್ಯಾಯಾಲಯ, ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಡೆದು ಎಲ್ಲಾ ನ್ಯಾಯಾಲಯಗಳಲ್ಲಿಯೂ ಜೀವಾವಧಿ ಶಿಕ್ಷೆಗೆ ಕಾರಣವಾಯಿತು. ಆದಾಗ್ಯೂ, ಅಪರಾಧ ನಡೆದ ದಿನಾಂಕದಂದು ನಾಗಯ್ಯ ಅವರಿಗೆ 16 ವರ್ಷ 7 ತಿಂಗಳು ಮಾತ್ರ ವಯಸ್ಸಾಗಿತ್ತು ಎಂದು ತೀರ್ಮಾನಿಸಿದ ಉನ್ನತ ನ್ಯಾಯಾಲಯವು ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
ನಾನು ಕಾನೂನು ಸಂಘರ್ಷಕ್ಕೆ ಗುರಿಯಾಗಿದ್ದ ಬಾಲಕ’ ಎಂಬ ಅರ್ಜಿದಾರರ ಪ್ರತಿಪಾದನೆ ಪರಿಶೀಲಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಬಾಲಾಪರಾಧಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 200ರ ಅನ್ವಯ ಗರಿಷ್ಠ 3 ವರ್ಷ ಪೊಲೀಸ್ ವಶದಲ್ಲಿ ಇರಬೇಕಿತ್ತು.ಅರ್ಜಿದಾರರು ಈಗಾಗಲೇ 12 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ವರದಿಯನ್ನು ಒಪ್ಪಿಕೊಳ್ಳುತ್ತಾ, ರಿಟ್ ಅರ್ಜಿಯನ್ನು ಅಂಗೀಕರಿಸಲಾಗಿದೆ. ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ ಎಂದು ಪೀಠ ತಿಳಿಸಿತು.