ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯೊಬ್ಬ ವಿಕೃತವಾಗಿ ವರ್ತಿಸಿದ್ದಾನೆ.
ಪ್ರತಿಮೆ ಮೇಲೆ ಕುಳಿತುಕೊಂಡಿದ್ದಲ್ಲದೇ ಬಾಯಿಗೆ ಬೀಡಿ ಇಟ್ಟು ವ್ಯಕ್ತಿಯೋರ್ವ ವಿಕೃತವಾಗಿ ವರ್ತಿಸಿರುವಂತಹ ಘಟನೆ ಮೈಸೂರು ನಗರದ ಕೆ.ಆರ್.ವೃತ್ತದಲ್ಲಿ ನಡೆದಿದೆ.
ವ್ಯಕ್ತಿಯ ಹುಚ್ಚಾಟ ಕಂಡು ಕೆಲ ಕಾಲ ಜನರು ಗಾಬರಿಯಾಗಿದ್ದರು. ಸದ್ಯ ಪರಾರಿಯಾಗಿರುವ ವ್ಯಕ್ತಿಯ ಪತ್ತೆಗೆ ದೇವರಾಜ ಠಾಣೆ ಪೊಲೀಸರು ಮುಂದಾಗಿದ್ದಾರೆ.