ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ, ಪ್ರಯಾಣ ಮತ್ತು ಚಿಂತೆಗಳ ನಡುವೆ ನಮ್ಮ ದೇಹ ನಿಧಾನವಾಗಿ ದಣಿಯುತ್ತದೆ. ಆಯಾಸದ ಜೊತೆಗೆ ಸ್ನಾಯು ನೋವು, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಪಾದಗಳಿಗೆ ಎಣ್ಣೆ ಮಸಾಜ್ ಮಾಡುವುದು ಒಂದು ಸರಳ, ಆದರೆ ಅತ್ಯಂತ ಪರಿಣಾಮಕಾರಿ ವಿಧಾನ. ಆಯುರ್ವೇದದಲ್ಲಿ “ಪಾದಾಭ್ಯಾಂಗ” ಎಂದು ಕರೆಯಲ್ಪಡುವ ಈ ವಿಧಾನವು ನೂರಾರು ವರ್ಷಗಳಿಂದ ಆರೈಕೆ ಪದ್ಧತಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
- ನರ ಬಿಂದುಗಳ ಮಹತ್ವ: ನಮ್ಮ ಪಾದಗಳಲ್ಲಿ ಸುಮಾರು 72,000 ನರ ಕೋಶಗಳಿವೆ. ಇವು ದೇಹದ ಪ್ರಮುಖ ಅಂಗಾಂಗಗಳಾದ ಹೃದಯ, ಶ್ವಾಸಕೋಶ ಮತ್ತು ಮೆದುಳಿನೊಂದಿಗೆ ನೇರ ಸಂಪರ್ಕ ಹೊಂದಿವೆ. ಮಸಾಜ್ ಮಾಡಿದಾಗ ಈ ನರಗಳು ಶಾಂತಗೊಳ್ಳುತ್ತವೆ ಮತ್ತು ಸಂಪೂರ್ಣ ದೇಹಕ್ಕೆ ಶಕ್ತಿ ಸಿಗುತ್ತದೆ.
- ರಕ್ತ ಪರಿಚಲನೆ ಸುಧಾರಣೆ: ಎಣ್ಣೆಯ ಮಸಾಜ್ ರಕ್ತದ ಸಂಚಾರವನ್ನು ಸುಧಾರಿಸಿ ಸ್ನಾಯು ನೋವು ಹಾಗೂ ಬಿಗಿತವನ್ನು ಕಡಿಮೆ ಮಾಡುತ್ತದೆ.
- ಉತ್ತಮ ನಿದ್ರೆ ಮತ್ತು ಶಾಂತಿ: ಮಸಾಜ್ ಮಾಡುವಾಗ ಡೋಪಮೈನ್ ಮತ್ತು ಸೆರೊಟೋನಿನ್ ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿಗೆ ಶಾಂತಿ ನೀಡುತ್ತವೆ ಹಾಗೂ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ.
- ಯಾವ ಎಣ್ಣೆ ಬಳಸಬೇಕು: ಎಳ್ಳೆಣ್ಣೆ ಚರ್ಮಕ್ಕೆ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ವಾತ ದೋಷವನ್ನು ಕಡಿಮೆ ಮಾಡುತ್ತದೆ. ಸಾಸಿವೆ ಎಣ್ಣೆ ದೇಹದಲ್ಲಿ ಶಾಖವನ್ನು ಹೆಚ್ಚಿಸಿ ಶೀತ, ಜ್ವರ ಮುಂತಾದವುಗಳಿಂದ ರಕ್ಷಿಸುತ್ತದೆ.
- ಸರಿಯಾದ ಸಮಯ: ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯಿ, ಸ್ವಲ್ಪ ಬಿಸಿ ಎಣ್ಣೆಯನ್ನು ಹಚ್ಚಿ 5–10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ ಸಾಕ್ಸ್ ಧರಿಸುವುದು ಉತ್ತಮ.
- ದೈನಂದಿನ ಅಭ್ಯಾಸದ ಪ್ರಯೋಜನ: ಪ್ರತಿದಿನ ಈ ಅಭ್ಯಾಸವನ್ನು ಮಾಡಿದರೆ ಆಯಾಸ ಕಡಿಮೆಯಾಗುವುದು, ನಿದ್ರೆ ಉತ್ತಮವಾಗುವುದು ಮತ್ತು ದೇಹವು ಚೈತನ್ಯದಿಂದ ತುಂಬುವುದು ಖಚಿತ. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

