ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಭಸ್ಮ ಆರತಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಅರ್ಚಕರು ಸೇರಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಸ್ಮ ಆರತಿ ವೇಳೆ ಮಹಾಕಾಲನಿಗೆ ಗುಲಾಲ್ ಅರ್ಪಿಸುವ ವೇಳೆ ಏಕಾಏಕಿ ಬೆಂಕಿ ಹೊತ್ತಿದೆ. ಧೂಳೇಂದಿ ಎಂಬ ಕಾರಣಕ್ಕೆ ಗರ್ಭಗುಡಿಯಲ್ಲ ಕವರ್ ಹಾಕಲಾಗಿದ್ದು, ಆ ಕವರ್ಗೆ ಬೆಂಕು ತಗುಲಿ ಅರ್ಚಕರು ಹಾಗೂ ಭಕ್ತರ ಮೇಲೆ ಬಿದ್ದಿದೆ. ಇದೀಗ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಸ್ಥಾನದಲ್ಲಿ ಭಸ್ಮೃತಿಯ ಪ್ರಧಾನ ಅರ್ಚಕ ಸಂಜಯ್ ಗುರು, ವಿಕಾಸ್ ಪೂಜಾರಿ, ಮನೋಜ್ ಪೂಜಾರಿ, ಅಂಶ್ ಪುರೋಹಿತ್, ಸೇವಕ ಮಹೇಶ್ ಶರ್ಮಾ ಮತ್ತು ಚಿಂತಾಮನ್ ಗೆಹ್ಲೋಟ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.ಈ ವೇಳೆ ಸಿಎಂ ಮೋಹನ್ ಯಾದವ್ ಅವರ ಪುತ್ರ ಹಾಗೂ ಪುತ್ರಿ ಕೂಡ ದೇವಸ್ಥಾನದಲ್ಲಿ ಹಾಜರಿದ್ದರು. ಇಬ್ಬರೂ ಭಸ್ಮೃತಿಯನ್ನು ನೋಡಲು ಹೋಗಿದ್ದರು. ಇಬ್ಬರೂ ಸುರಕ್ಷಿತವಾಗಿದ್ದಾರೆ.