ಹೊಸದಿಗಂತ ವರದಿ,ಯಾದಗಿರಿ
ಯಾದಗಿರಿ ತಾಲೂಕಿನ ಕುರುಕುಂಬಳ ತಾಂಡ(ಆಶನಾಳ ಗ್ರಾಮ)ದ ಥಾವರು ರಾಠೋಡ್ ಅವರ ಪುತ್ರ ವೈದ್ಯ ವಿದ್ಯಾರ್ಥಿ ವಿಶಾಲ್ ರಾಠೋಡ್ (22) ಕೇರಳದ ಕುತ್ತುಪುರಂಭದಲ್ಲಿ ಭಾನುವಾರ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಹಾಸನದ ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಅಂತಿಮ ವರ್ಷದಲ್ಲಿ ವಿಶಾಲ್ ವಿದ್ಯಾಭ್ಯಾಸ ಮಾಡುತ್ತಿದ್ದ.
ಎಂಟು ಜನ ಸ್ನೇಹಿತರೋಡಗುಡಿ ನಾಲ್ಕು ಬೈಕುಗಳಲ್ಲಿ ಕೇರಳದ ಕಣ್ಣೂರಿಗೆ ಪ್ರವಾಸಕ್ಕೆ ತೆರಳಿದ್ದ ಅವರು ಭಾನುವಾರ ವಾಪಸ್ ಬರುವಾಗ ಮಧ್ಯಾಹ್ನ ಕುತ್ತುಪುರಂಭ ಬಳಿ ಬೈಕ್ ಸ್ಕಿಡ್ ಆಗಿ ಎದುರುಗಡೆಯ ವಾಹನಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ವಿಶಾಲ್ ಸಾವನ್ನಪ್ಪಿದ್ದು,ಇನ್ನೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕುತ್ತುಪುರಂಭದ ತಾಲೂಕು ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ವಿಶಾಲ್ ಅವರ ಶವವನ್ನಿಡಲಾಗಿದೆ.
ಸುದ್ದಿ ತಿಳಿದ ತಕ್ಷಣವೇ ವಿಶಾಲ್ ಅವರ ಕುಟುಂಬ ಕುತ್ತುಪುರಂಭಕ್ಕೆ ತೆರಳಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.