ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಸಂಸ್ಥೆಯೊಂದು ಅಪ್ರಾಪ್ತ ವಯಸ್ಕ ಬಾಲಕನಿಗೆ ಮದ್ಯ ಕುಡಿಸಿದೆ, ಮದ್ಯ ಕುಡಿದು ಮನೆಗೆ ಹೋದರೆ ತಂದೆ ತಾಯಿ ಏನು ಮಾಡುತ್ತಾರೋ ಎನ್ನುವ ಭಯಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಪಬ್‌ನಲ್ಲಿ ಪಾರ್ಟಿ ಮಾಡಿದ್ದು, ಮನೆಗೆ ಹೋಗುವ ಸಮಯ ಬಂದಾಗ ಬಾಲಕ ಹೆದರಿದ್ದಾನೆ. ತನ್ನ ಅಪಾರ್ಟ್‌ಮೆಂಟ್ ಬಳಿ ಬಂದು ನಿಂತ ಬಾಲಕ ಮನೆಗೆ ಹೋಗಲು ಹೆದರಿ ಏಳನೇ ಮಹಡಿಯಿಂದ ಜಿಗಿದು ಪ್ರಾಣಬಿಟ್ಟಿದ್ದಾನೆ.
ಇದನ್ನೂ ಓದಿ: SHOCKING |ಯಾಕಿಷ್ಟು ಸಾಲ ಮಾಡಿದಿರಿ ಎಂದು ಗರಂ ಆದ ಪತ್ನಿಯ ಕತ್ತನ್ನು ಸೀಳಿ ಕೊಂದ ಪತಿ
ಮೃತ ಬಾಲಕ ಮತ್ತು ಸ್ನೇಹಿತರು ಸ್ಥಳೀಯ ಕಂಪನಿಯಲ್ಲಿದ್ದಾಗ ಈ ಕೃತ್ಯ ನಡೆದಿದ್ದು, ಸಂಸ್ಥೆಯು ಅಪ್ರಾಪ್ತರಿಗೆ ಮದ್ಯ ಕುಡಿಸಿರುವ ಆರೋಪದ ಮೇಲೆ, ಕಂಪನಿಯ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ ಮತ್ತು ಕರ್ನಾಟಕ ಮದ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.



