September 30, 2026
Wednesday, September 30, 2026
spot_img

ಪಂಜಾಬ್ ನಲ್ಲಿ ಅಧಿಕಾರಿ ಆತ್ಮಹತ್ಯೆ ಕೇಸ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಾರಿಗೆ ಮಿನಿಸ್ಟರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು ಶನಿವಾರ ತಮ್ಮ ಸಚಿನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಮೃತಸರದಲ್ಲಿ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಆತ್ಮಹತ್ಯೆ ಕೇಸ್ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸಿಎಂ ಭಗವಂತ್ ಮಾನ್ ಸರಕಾರಕ್ಕೆ ಭುಲ್ಲರ್ ರಾಜೀನಾಮೆ ನೀಡಿದ್ದಾರೆ.

ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್‌ ಸಿಂಗ್‌ ರಾಂಧವ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೂ ಮುನ್ನ ಸಚಿವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದರು.

ಇದರ ಬೆನ್ನಿಗೆ ಸಚಿವ ಭುಲ್ಲರ್‌ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ರೀತಿಯ ತಪ್ಪು ಮಾಡಿಲ್ಲ. ನಮ ಪಕ್ಷ ಸತ್ಯದ ಪರವಾಗಿದ್ದು, ಹೀಗಾಗಿ ನನ್ನ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಯಬೇಕು. ಅಲ್ಲಿವರೆಗೆ ನಾನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Must Read